ಬೆಂಗಳೂರು:ಕಂಟೇನ್ಮೆಂಟ್ ಝೋನ್ ಹಾಗೂ ರೆಡ್ ಝೋನ್ ಏರಿಯಾಗಳನ್ನು ಹೊರತು ಪಡಿಸಿ, ಉಳಿದ ಕಡೆ ಕ್ಯಾಬ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ, ಗ್ರಾಹಕರಿಲ್ಲದೇ ಕ್ಯಾಬ್ ಚಾಲಕರು ಪರದಾಡುತ್ತಿದ್ದಾರೆ. ಇದರ ಜೊತೆಗೆ ಕ್ಯಾಬ್ ಚಾಲಕರು ಕಡ್ಡಾಯವಾಗಿ ಸ್ಯಾನಿಟೈಸರ್ ,ಮಾಸ್ಕ್, ಗ್ಲೌಸ್ ಧರಿಸಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಇದರಿಂದ ಕ್ಯಾಬ್ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.
ಓಲಾ, ಉಬರ್ ಕಂಪನಿಯಿಂದ ಕಂಟೇನ್ಮೆಂಟ್- ರೆಡ್ ಝೋನ್ಗಳಿಗೆ ಬುಕ್ಕಿಂಗ್: ತನ್ವೀರ್ ಪಾಷಾ ಆರೋಪ - ಕ್ಯಾಬ್ ಚಾಲಕರು ಕೊರೊನಾ ವೈರಸ್ಗೆ ತುತ್ತು‘
ಓಲಾ ಉಬರ್ ಕಂಪನಿಯವರು ಬೇಜವಾಬ್ದಾರಿ ತೋರಿದ್ದು, ಕಂಟೇನ್ಮೆಂಟ್ ಹಾಗೂ ರೆಡ್ ಝೋನ್ಗಳಿಗೆ ಬುಕ್ಕಿಂಗ್ ಕೊಡ್ತಿದ್ದಾರೆ. ಇದರ ಬಗ್ಗೆ ತಿಳಿಯದ ಕ್ಯಾಬ್ ಚಾಲಕರು ಕೊರೊನಾ ಇರುವ ಏರಿಯಾಗಳಿಗೆ ಹೋಗ್ತಿದ್ದಾರೆ ಎಂದು ಓಲಾ ಉಬರ್ ಚಾಲಕರ ಸಂಘದ ಅಧ್ಯಕ್ಷ , ತನ್ವೀರ್ ಪಾಷಾ ಆರೋಪಿಸಿದ್ದಾರೆ.
ಕ್ಯಾಬ್ ಓಡಿಸುವ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳಲು ಬೇಕಿರುವ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ಗಳನ್ನು ಕ್ಯಾಬ್ ಚಾಲಕರಿಗೆ ಸರ್ಕಾರವೇ ನೀಡಲಿ ಎಂದು ಓಲಾ ಉಬರ್ ಚಾಲಕರ ಸಂಘದ ಅಧ್ಯಕ್ಷ , ತನ್ವೀರ್ ಪಾಷಾ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದರ ಜೊತೆಗೆ ಓಲಾ ಉಬರ್ ಕಂಪನಿಯವರು ಬೇಜವಾಬ್ದಾರಿ ತೋರಿದ್ದು, ಕಂಟೇನ್ಮೆಂಟ್ ಹಾಗೂ ರೆಡ್ ಝೋನ್ಗಳಿಗೆ ಬುಕ್ಕಿಂಗ್ ಕೊಡ್ತಿದ್ದಾರೆ. ಇದರ ಬಗ್ಗೆ ತಿಳಿಯದ ಕ್ಯಾಬ್ ಚಾಲಕರು ಕೊರೊನಾ ಇರುವ ಏರಿಯಾಗಳಿಗೆ ಹೋಗ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ, ನಮ್ಮ ಚಾಲಕರಿಗೆ ಕೊರೊನಾ ಬಂದು ಅವರ ಕುಟುಂಬದವರಿಗೂ ಹರಡಿದ್ರೆ, ಇದಕ್ಕೆ ಯಾರು ಹೊಣೆ. ಆದ್ದರಿಂದ ಕೂಡಲೇ ಸರ್ಕಾರ ಎಚ್ಚೆತ್ತು. ಚಾಲಕರ ಬಗ್ಗೆ ಅಸಡ್ಡೆ ತೋರುತ್ತಿರುವ ಓಲಾ ಉಬರ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ ಕಂಪನಿಗಳಿಗೆ ಮಾರ್ಗಸೂಚಿ ಕೊಟ್ಟು ಕಂಟೇನ್ಮೆಂಟ್ ಹಾಗೂ ರೆಡ್ ಝೋನ್ ಏರಿಯಾಗಳನ್ನು ಬುಕ್ಕಿಂಗ್ನಿಂದ ತೆಗೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕ್ಯಾಬ್ ಚಾಲಕರು ಕೊರೊನಾ ವೈರಸ್ಗೆ ತುತ್ತಾಗಲಿದ್ದಾರೆ ಎಂದು ಓಲಾ ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆತಂಕ ವ್ಯಕ್ತಪಡಿಸಿದ್ದಾರೆ.