ಬೆಂಗಳೂರು: ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಹೆಡ್ಕಾನ್ಸ್ಟೇಬಲ್ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ... ಹೆಡ್ಕಾನ್ಸ್ಟೇಬಲ್ ಸಾವು! - Tanker collides with constable bike
ಅಪಘಾತದಲ್ಲಿ ಗಾಯಗೊಂಡಿದ್ದ ನಂದಿನಿ ಲೇಔಟ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಭಕ್ತರಾಮ್ ಮೃತ. ಗೊರಗುಂಟೆ ಪಾಳ್ಯದ ಎಮ್ಇಎಸ್ ಟವರ್ ಬಳಿ ಡಿಕ್ಕಿ ಹೊಡೆದಿದ್ದ ಟ್ಯಾಂಕರ್.
ನಂದಿನಿ ಲೇಔಟ್ ಠಾಣೆಯ ಭಕ್ತರಾಮ್ ಮೃತ ಮುಖ್ಯಪೇದೆ. ಕೆಲಸಮುಗಿಸಿ ಬೈಕ್ನಲ್ಲಿ ಜಾಲಹಳ್ಳಿಯ ತಮ್ಮ ಮನೆಗೆ ಬೈಕ್ನಲ್ಲಿ ತೆರಳ್ತಿದ್ದ ವೇಳೆಗೊರಗುಂಟೆ ಪಾಳ್ಯದ ಎಮ್ಇಎಸ್ಟವರ್ ಬಳಿಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಭಕ್ತರಾಮ್ ತಲೆಗೆ ತೀವ್ರ ಪೆಟ್ಟಾಗಿತ್ತು, ಜೊತೆಗೆ ಕಾಲಿಗೆ ಗಂಭೀರ ಗಾಯವಾಗಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ಆದ್ರೆ, ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆ ಚಿಕಿತ್ಸೆ ಫಲಿಸದೆ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಯಶವತಂಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಎಮ್ಎಸ್ರಾಮಯ್ಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿ, ತನಿಖೆ ಮುಂದುವರೆಸಿದ್ದಾರೆ..