ಬೆಂಗಳೂರು: ಜಯನಗರದಲ್ಲಿರುವ ಎಂಜಿಎಂ ಗ್ರೂಪ್ ಆಫ್ ಕಂಪನೀಸ್ನ ಶಾಖೆಯೊಂದರ ಮೇಲೆ ದಾಳಿ ನಡೆಸಿರುವ ತಮಿಳುನಾಡು ವಲಯ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ತಮಿಳುನಾಡು ಐಟಿ ಅಧಿಕಾರಿಗಳಿಂದ ಬೆಂಗಳೂರಿನ ಎಂಜಿಎಂ ಕಚೇರಿ ಶಾಖೆ ಮೇಲೆ ದಾಳಿ - I T raid on MGM company
ಎಂಜಿಎಂ ಗ್ರೂಪ್ ಆಫ್ ಕಂಪನೀಸ್ನ ಶಾಖಾ ಕಚೇರಿ ಮೇಲೆ ದಾಳಿ ನಡೆಸಿರುವ ತಮಿಳುನಾಡು ವಲಯದ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
![ತಮಿಳುನಾಡು ಐಟಿ ಅಧಿಕಾರಿಗಳಿಂದ ಬೆಂಗಳೂರಿನ ಎಂಜಿಎಂ ಕಚೇರಿ ಶಾಖೆ ಮೇಲೆ ದಾಳಿ I T raid on MGM company](https://etvbharatimages.akamaized.net/etvbharat/prod-images/768-512-15564566-thumbnail-3x2-news.jpg)
ತಮಿಳುನಾಡು ಐಟಿ ಅಧಿಕಾರಿಗಳಿಂದ ಬೆಂಗಳೂರಿನಲ್ಲಿ ಶೋಧ
ತಮಿಳುನಾಡಿನ ಖ್ಯಾತ ಉದ್ಯಮಿ ಎಂ.ಜಿ. ಮುತ್ತು ಮಾಲೀಕತ್ವದ ಈ ಕಂಪನಿಯ ಕೊಯಮತ್ತೂರು, ಕೊಚ್ಚಿ, ಆಂಧ್ರಪ್ರದೇಶ ಹಾಗು ಬೆಂಗಳೂರು ಸೇರಿದಂತೆ 50 ಕಡೆಗಳಲ್ಲಿರುವ ಕಚೇರಿಗಳ ಮೇಲೆ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎಂಜಿಎಂ ಗ್ರೂಪ್ ಆಫ್ ಕಂಪನೀಸ್ 250 ಕೋಟಿ ರೂ ಹಗರಣ ಹಾಗೂ ವಂಚನೆ ಆರೋಪ ಎದುರಿಸುತ್ತಿದೆ.
ಇದನ್ನೂ ಓದಿ:ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ನಿರ್ಧಾರವಾಗಿಲ್ಲ : ಯಡಿಯೂರಪ್ಪ