ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ ತಮಿಳು ಚಿತ್ರದ ನಟ ವಿಜಯ್ ಅವರಿಂದ ಕಾರು ಖರೀದಿಸಿದ್ದ ಮಾಲೀಕನ ಸಹಚರನಿಗೆ ಕೆ.ಆರ್.ಪುರ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ... ತಮಿಳು ನಟ ವಿಜಯ್ ಕಾರು ಖರೀದಿಸಿದ್ದ ಮಾಲೀಕನ ಸಹಚರನಿಗೆ ದಂಡ - Tamil actor Vijay car
ಕೆಲ ವರ್ಷಗಳ ಹಿಂದೆ ನಟ ವಿಜಯ್ ಎಂಬುವರಿಂದ ಜೊಸೇಫ್ ಎಂಬುವವರು ಕಾರನ್ನು ಖರೀದಿ ಮಾಡಿದ್ದರು. ಆದರೆ ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ ಕೆ.ಆರ್.ಪುರ ಸಂಚಾರಿ ಪೊಲೀಸರು ಇದೀಗ ದಂಡ ವಿಧಿಸಿದ್ದಾರೆ.
ತಮಿಳು ನಟ ವಿಜಯ್ ಕಾರು ಖರೀದಿಸಿದ್ದ ಮಾಲೀಕನ ಸಹಚರನಿಗೆ ದಂಡ
ಇಂದು ತಮಿಳುನಾಡಿನಿಂದ ಕೆ.ಆರ್.ಪುರ ರೈಲು ನಿಲ್ದಾಣ ಬಳಿ ಬರುತ್ತಿದ್ದ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿರುವುದನ್ನು ಕಂಡ ಟ್ರಾಫಿಕ್ ಇನ್‌ಸ್ಪೆಕ್ಟರ್ ಮೊಹಮ್ಮದ್, ಕೂಡಲೇ ಕಾರನ್ನು ತಡೆದು ವಕೀಲ ಅನೀಶ್ ಎಂಬುವರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸಿ ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ.
ಕೆಲ ವರ್ಷಗಳ ಹಿಂದೆ ನಟ ವಿಜಯ್ ಎಂಬುವರಿಂದ ಜೊಸೇಫ್ ವಿಜಯ್ ಕಾರು ಖರೀದಿ ಮಾಡಿದ್ದರು. ಕೆಲಸ ನಿಮಿತ್ತ ಇಂದು ಸಂಜೆ ಅನೀಶ್ ಎಂಬುವರು ನಗರಕ್ಕೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.