ಕರ್ನಾಟಕ

karnataka

ETV Bharat / state

ಕೊರೊನಾ ಪಾಸಿಟಿವ್​:   ಬೆಂಗಳೂರು ಪೂರ್ವ ತಾಲೂಕು ಕಚೇರಿ ಸೀಲ್​ಡೌನ್ - ಬಿಬಿಎಂಪಿ ಸಿಬ್ಬಂದಿ ಔಷಧ ಸಿಂಪಡಣೆ

ಕಚೇರಿಗೆ ಬಿಬಿಎಂಪಿ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದ್ದು, ಪರಿಸ್ಥಿತಿ ಅವಲೋಕಿಸಿದ ಬಳಿಕ ಗುರುವಾರದಿಂದ ತಹಶೀಲ್​​​ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಹಶೀಲ್ದಾರ್ ತೇಜಸ್ ಕುಮಾರ್ ಹೇಳಿದರು.

sealdown
sealdown

By

Published : Jul 22, 2020, 9:10 AM IST

ಬೆಂಗಳೂರು:ಮೂರು‌ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕು ಕಚೇರಿಯನ್ನು ಮತ್ತೊಮ್ಮೆ ಸೀಲ್​ಡೌನ್ ಮಾಡಲಾಗಿದೆ.

ವಿಶೇಷ ತಹಶೀಲ್ದಾರ್, ಆರ್.ಐ ಹಾಗೂ ತಹಶೀಲ್ದಾರ್ ಅವರ ವಾಹನ ಚಾಲಕರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸೀಲ್​ಡೌನ್ ಮಾಡಲಾಗಿದೆ.

ಕಚೇರಿಗೆ ಬಿಬಿಎಂಪಿ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದ್ದು, ಪರಿಸ್ಥಿತಿ ಅವಲೋಕಿಸಿದ ಬಳಿಕ ಗುರುವಾರದಿಂದ ತಹಶೀಲ್ದಾರ್ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಹಶೀಲ್ದಾರ್ ತೇಜಸ್ ಕುಮಾರ್ ಹೇಳಿದರು.

ತಾತ್ಕಾಲಿಕವಾಗಿ ಬೆಂಗಳೂರು ಪೂರ್ವ ತಾಲೂಕು ಕಚೇರಿಯ ಕಾರ್ಯಗಳನ್ನು ತಾಲೂಕಿನ ಕಾರ್ಯನಿರ್ವಾಹಕ ಕಚೇರಿಯಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details