ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುರಗವನ್ನುಂಟು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಉಮೇಶ್ ಕತ್ತಿ ಒತ್ತಾಯಿಸಿದ್ದಾರೆ.
ಆಡಿಯೋ ಲೀಕ್ ಮಾಡಿದವರನ್ನು ಸುಮ್ಮನೆ ಬಿಡಬೇಡಿ: ಸಿಎಂಗೆ ಕತ್ತಿ ಒತ್ತಾಯ - Umesh katti meet yadiyurappa latest news
ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದ್ದರು. ಒಂದು ಗಂಟೆಗೂ ಅಧಿಕ ಸಮಯ ಸಿಎಂ ಜೊತೆ ಚರ್ಚೆ ನಡೆಸಿದ ಅವರು. ಆಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು.
![ಆಡಿಯೋ ಲೀಕ್ ಮಾಡಿದವರನ್ನು ಸುಮ್ಮನೆ ಬಿಡಬೇಡಿ: ಸಿಎಂಗೆ ಕತ್ತಿ ಒತ್ತಾಯ](https://etvbharatimages.akamaized.net/etvbharat/prod-images/768-512-4975291-thumbnail-3x2-dr.jpg)
ಉಮೇಶ್ ಕತ್ತಿ
ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದ್ದರು. ಒಂದು ಗಂಟೆಗೂ ಅಧಿಕ ಸಮಯ ಸಿಎಂ ಜೊತೆ ಚರ್ಚೆ ನಡೆಸಿದ ಅವರು. ಆಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು.
ನಮ್ಮ ವಿರೋಧಿಗಳನ್ನು ಸುಮ್ಮನೆ ಬಿಡಬಾರದು, ಈ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ಕಷ್ಟವಾಗಲಿದೆ ನಾವೀಗ ಸುಮ್ಮನಾದ್ರೆ ನಮ್ಮ ವಿರೋಧಿಗಳು ಇನ್ನಷ್ಟು ಬಲಿಷ್ಠವಾಗುತ್ತಾರೆ, ಈಗ ಅವರ ಜುಟ್ಟು ನಿಮ್ಮ ಕೈಯಲ್ಲಿದೆ, ಸುಮ್ಮನಾಗಬೇಡಿ ಎಂದು ಸಿಎಂ ಮೇಲೆ ಕತ್ತಿ ಒತ್ತಡ ಹೇರಿದರು.