ಬೆಂಗಳೂರು: ನಮ್ಮ ಮನೆಗೆ ಬೆಂಕಿ ಹಾಕಿ ಐದು ತಿಂಗಳು ಆಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಮಾಜಿ ಮೇಯರ್, ಕಾರ್ಪೊರೇಟರ್ ಜೈಲಲ್ಲಿದ್ದಾರೆ. ನಮಗೆ ಅನ್ಯಾಯ ಆಗಿದೆ ಎಂದು ಮತ್ತೊಮ್ಮೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರಹಾಕಿದ್ದಾರೆ.
ಸಿಎಲ್ಪಿ ನಾಯಕರಿಗೆ, ಜಮೀರ್ಗೆ ಈ ಕುರಿತು ಹೇಳಿದ್ದೇನೆ. ಆರೋಪಿಗಳ ಮೇಲೆ ಶಿಸ್ತು ಕ್ರಮ ಆಗಬೇಕಿದೆ. ಶಿಸ್ತು ಕ್ರಮ ತೆಗೆದುಕೊಳ್ಳೋದು ಅವರಿಗೆ ಬಿಟ್ಟ ವಿಚಾರ. ನನಗೆ ಕ್ಷೇತ್ರದ ಜನ, ದೇವರ ಆಶೀರ್ವಾದ ಇದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಅಂತ ನಾನು ಒತ್ತಾಯಿಸುತ್ತೇನೆ ಎಂದರು.
ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಅಖಂಡ ಶ್ರೀನಿವಾಸಮೂರ್ತಿ ಇದೇ ವೇಳೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಕ್ಷೇತ್ರದ ಜನತೆಗೆ ಆಹಾರ ಸಾಮಗ್ರಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 20 ಸಾವಿರ ಜನರಿಗೆ ಅಕ್ಕಿ ಹಾಗೂ ಆಹಾರ ಸಾಮಗ್ರಿ ವಿತರಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮವನ್ನು ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಆಹಾರ ಸಾಮಗ್ರಿ ವಿತರಣೆ ಮಾಡಲಾಯಿತು. 3 ಕೆಜಿ ಅಕ್ಕಿ, ಬೆಲ್ಲ, ಅರ್ಧ ಲೀಟರ್ ಎಣ್ಣೆ ವಿತರಿಸಲಾಯಿತು. ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ:ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್