ಕೊರೊನಾ ಟೆಸ್ಟ್ ಫಲಿತಾಂಶ ತಕ್ಷಣ ಬರುವಂತೆ ಕ್ರಮ ಕೈಗೊಳ್ಳಿ: ಹೆಚ್ಡಿಕೆ ಮನವಿ
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‌ಡೌನ್ ಮಾಡಿರುವುದರ ಜೊತೆಗೆ ಕೊರೊನಾ ಪರೀಕ್ಷಾ ವರದಿ ಶೀಘ್ರದಲ್ಲಿ ಬರುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮನವಿ
ಬೆಂಗಳೂರು:ಕೊರೊನಾ ಪರೀಕ್ಷೆ ಫಲಿತಾಂಶ ತಕ್ಷಣ ಬರುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಒಬ್ಬ ವ್ಯಕ್ತಿಯ ಸ್ಯಾಂಪಲ್ ಸಂಗ್ರಹಿಸಿ ಒಂದು ವಾರವಾದರೂ ಪರೀಕ್ಷಾ ವರದಿ ಬಂದಿಲ್ಲವಾದರೆ ಆತ ಎಲ್ಲಾ ಕಡೆ ಓಡಾಡಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬೆಳಗ್ಗೆ ನೀಡುವ ಸ್ಯಾಂಪಲ್ನ ಫಲಿತಾಂಶ ಸಂಜೆ ಬರುವ ಹಾಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರ ಆಧಾರದಲ್ಲಿ ಸೋಂಕಿತನಿಗೆ ಕೂಡಲೇ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಆದ್ದರಿಂದ ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಅತ್ಯಂತ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.ಸರ್ಕಾರ ಒಂದು ಲಕ್ಷ ಟೆಸ್ಟ್ ಕಿಟ್ಗಳನ್ನು ತರಿಸಿದೆ. ಈ ಕಿಟ್ ಮೂಲಕ ಎಲ್ಲರ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಬಂದ ವ್ಯಕ್ತಿಗೆ ಬೇಗ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Last Updated : Jul 12, 2020, 2:29 PM IST