ಕರ್ನಾಟಕ

karnataka

ETV Bharat / state

ಪ್ರಧಾನಿಗೆ ಧಮ್ ಇದ್ರೆ ಮೊದಲು ಬಿಎಸ್​​​ವೈ ಮೇಲೆ ಕ್ರಮ ಕೈಗೊಳ್ಳಲಿ: ವಿ.ಎಸ್. ಉಗ್ರಪ್ಪ - Former MP VS Ugrappa

ದೇಶದಲ್ಲಿ ಭ್ರಷ್ಟಾಚಾರ ತೊಲಗಿಸುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕುರಿತಂತೆ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಭ್ರಷ್ಟಾಚಾರ ತೊಲಗಿಸಲು ನಿಜವಾಗಿಯೂ ಪ್ರಧಾನಿಗಳಿಗೆ ಧಮ್ ಇದ್ರೆ ಮೊದಲು ಯಡಿಯೂರಪ್ಪ ಮೇಲೆ ಕ್ರಮ ಕೈಗೊಳ್ಳಲಿ..

Former MP VS Ugrappa
ಮಾಜಿ ಸಂಸದ ವಿ.ಎಸ್ ಉಗ್ರಪ್ಪ

By

Published : Oct 28, 2020, 7:21 PM IST

ಬೆಂಗಳೂರು: ಭ್ರಷ್ಟಾಚಾರ ತೊಲಗಿಸಲು ನಿಜವಾಗಿಯೂ ಪ್ರಧಾನಿಗಳಿಗೆ ಧಮ್ ಇದ್ರೆ ಮೊದಲು ಯಡಿಯೂರಪ್ಪ ಮೇಲೆ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.

ದೇಶದಲ್ಲಿ ಭ್ರಷ್ಟಾಚಾರ ತೊಲಗಿಸುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಪಕ್ಷದ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವಾಗ ಕ್ರಮ ಕೈಗೊಂಡಿಲ್ಲ ಅಂದರೆ ಪ್ರಧಾನಿಗಳನ್ನು ಜನರು ಬೊಗಳೆ ದಾಸರು ಎಂದುಕೊಳ್ತಾರೆ. ಯಡಿಯೂರಪ್ಪ ಮಂತ್ರಿಯಾಗಿದ್ದಾಗ ಅವರ ಆಸ್ತಿ ಎಷ್ಟಿತ್ತು? ಇವಾಗ ಸಿಎಂ ಆದ ಮೇಲೆ ಅವರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಪ್ರಧಾನಿಗಳು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರಧಾನಿಗಳ ಹೇಳಿಕೆ ಬರೀ ಹೇಳಿಕೆಯಷ್ಟೇ ಉಳಿದುಕೊಳ್ಳುತ್ತೆ ಎಂದರು.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ

ರಾಜ್ಯದೆಲ್ಲೆಡೆ ಕಾಂಗ್ರೆಸ್ ಅಲೆ ಇದೆ. ಎರಡು ಉಪ ಚುನಾವಣೆಯಲ್ಲೂ ಗೆದ್ದೇ ಗೆಲ್ತೇವೆ. ಯೇಸು ಬೆಟ್ಟದ ಬಗ್ಗೆ ಸರ್ಕಾರದ ನಾಲ್ವರು ಸಚಿವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಮ್ಮ ಅಧ್ಯಕ್ಷರು ಸ್ವೀಕಾರ ಮಾಡ್ತಾರೆ. ಈಗ ಉಪ ಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಈ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡಲಿ. ವಿಧಾನಸೌಧದ ಮುಂದೆಯೇ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದರು.

ಆರ್.ಆರ್ ನಗರದಲ್ಲಿ ವೋಟರ್ ಐಡಿಗೆ ಹಣ ಹಂಚಿಕೆ ವಿಚಾರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ವೋಟರ್ ಐಡಿ ಕಲೆಕ್ಟ್‌ ಮಾಡಿ ಮತದಾರರರಿಗೆ ಹಣ ಹಂಚಿಕೆ ಮಾಡಿದ್ದಾರೆ. ಸಾವಿರಾರು ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆಂಬ ಆರೋಪ ಇದೆ.

ವೋಟರ್ ಐಡಿ ಕಲೆಕ್ಸ್ ಮಾಡಿ ಮತದಾರರರಿಗೆ ಹಣ ಹಂಚಿಕೆ ಮಾಡಿದ್ದಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆಂಬ ಅನುಮಾನ ಇದೆ. ಈ ಸಂಬಂಧವಾಗಿ ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಯಶವಂತಪುರ ಠಾಣೆಯಲ್ಲಿ ನೀಡಿದ ದೂರಿಗೆ ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು.

ABOUT THE AUTHOR

...view details