ಬೆಂಗಳೂರು :ಡ್ರಗ್ಸ್ ಪ್ರಕರಣ ಆರೋಪದಡಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತದ ನಂತರ ಮತ್ತೆ ಜೈಲಿಗೆ ಕರೆದೊಯ್ಯಲಾಗಿದೆ. ಈ ವೇಳೆ ಜೈಲಾಧಿಕಾರಿಗಳಿಗೆ ರಾಗಿಣಿ ವರಸೆ ಮೇಲೆ ಅನುಮಾನ ಬಂದು ಅನಾರೋಗ್ಯ ನಾಟಕ ವಾಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ.
ಆಸ್ಪತ್ರೆಯಿಂದ ಜೈಲಿಗೆ ಬಂದಿರುವ ರಾಗಿಣಿಯವರ ಬಳಿ ಜೈಲಾಧಿಕಾರಿಯೋರ್ವರು ಮಾತನಾಡುತ್ತಾ, ಹೀಗೆ ಆಸ್ಪತ್ರೆಗೆ ಹೋಗಿ ರಿಪೋರ್ಟ್ ಕೊಟ್ಟರೆ ಬೇಲ್ ಸಿಗುತ್ತದೆ ಅಲ್ವಾ ಎಂದು ಬೇಕಂತಲೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗರಂ ಆದ ರಾಗಿಣಿ, ಸಂಜನಾ ಹಾಗೆ ನಾನು ರಿಪೋರ್ಟ್ ತೋರಿಸಿ ಹೋಗಲ್ಲ. ನನಗೇನು ತಲೆ ಕೆಟ್ಟಿದ್ಯಾ? ಅವಳ ತರ ನಾನ್ಯಾಕೆ ಮಾಡಲಿ.
ನನ್ನ ತಂದೆ-ತಾಯಿ ಬೇಸರದಿಂದಿರೋದು ನಿಜ. ಆದರೆ, ನಾನು ಸುಮ್ಮನೆ ನೆಪ ಮಾಡಲ್ಲ. ಒಂದು ವೇಳೆ ಅನಾರೋಗ್ಯದಿಂದ ನನಗೆ ಬೇಲ್ ಸಿಕ್ಕರೆ ನಾನು ಆಚೆ ಹೋಗಲ್ಲ. ಇಲ್ಲೆ ಪರಪ್ಪನ ಅಗ್ರಹಾರದಲ್ಲೇ ಇರುತ್ತೇನೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ 'ರಾಗಿಣಿ ಈಸ್ ಕ್ಲೀನ್ ಹ್ಯಾಂಡ್' ಎಂದು ಸಾಬೀತಾಗಬೇಕು. ಡ್ರಗ್ಸ್ ಕಳಂಕ ಹೋಗಬೇಕು. ಆಗಲೇ ನಾನು ಹೋಗೋದು ಎಂದು ಜೈಲಾಧಿಕಾರಿಗಳ ಮುಂದೆ ರಾಗಿಣಿ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇತ್ತ ರಾಗಿಣಿಯನ್ನು ಆಚೆ ತರಲೆ ಬೇಕೆಂದು ನಟಿಯ ಪೋಷಕರು ವಕೀಲರ ಮೂಲಕ ಅನಾರೋಗ್ಯ ಕಾರಣ ನೀಡಿ ನ್ಯಾಯಾಲಯದಲ್ಲಿ ವಾದ ಮಾಡಲು ಸಿದ್ಧಪಡಿಸಿದ್ದಾರೆ. ಆದರೆ, ತನ್ನ ಹಠದಿಂದ ಇದ್ದ ಮಾರ್ಗವನ್ನೂ ಮಗಳು ಕಳೆದುಕೊಳ್ಳುತ್ತಾಳಾ ಎಂಬ ಕುರಿತು ಪೋಷಕರಿಗೆ ಚಿಂತೆಯಾಗಿದೆ. ಇತ್ತ ಜೈಲಾಧಿಕಾರಿಗಳಿಗೆ ರಾಗಿಣಿಯವರು ನಾಟಕವಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.