ಕರ್ನಾಟಕ

karnataka

ETV Bharat / state

ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಚುಚ್ಚಿ ಸುಲಿಗೆ: ಆರೋಪಿಗಳು ಅಂದರ್ - ಮೊಬೈಲ್ ಕಸಿದು ಪರಾರಿ

ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಚುಚ್ಚಿ ಸುಲಿಗೆ. ಅಕ್ಟೋಬರ್​ 10ರಂದು ಬೆಂಗಳೂರಿನಲ್ಲಿ ನಡೆದ ಘಟನೆ. ಸುಲಿಗೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆ. ಇಬ್ಬರು ಸುಲಿಗೆಕೋರರ ಬಂಧನ.

Two arrested in Bengaluru
ಸಜ್ಜಾದ್ ಖಾನ್ ಹಾಗೂ ಸೈಫ್ ಮೌಲಾನ ಬಂಧಿತ ಆರೋಪಿಗಳು

By

Published : Oct 29, 2022, 6:29 PM IST

ಬೆಂಗಳೂರು:ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಇರಿದು ಮೊಬೈಲ್ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಸಜ್ಜಾದ್ ಖಾನ್ ಹಾಗೂ ಸೈಫ್ ಮೌಲಾನ ಬಂಧಿತ ಆರೋಪಿಗಳು.

ರಾತ್ರಿ ವೇಳೆ ಒಬ್ಬಂಟಿಯಾಗಿ ತೆರಳುವ ಸ್ವಿಗ್ಗಿ ಡೆಲಿವರಿ ಬಾಯ್ಸ್​​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು ಬೈಕ್​ನಲ್ಲಿ ಗುದ್ದಿ ಅಮಾಯಕರನ್ನು ಹೆದರಿಸಿ ಮೊಬೈಲ್ ಕಸಿದುಕೊಳ್ಳುತ್ತಿದ್ದರು.‌ ಬೈಕ್ ಸವಾರರು ವಿರೋಧ ವ್ಯಕ್ತಪಡಿಸಿದರೆ ಮಾರಕಾಸ್ತ್ರಗಳಿಂದ ಇರಿದು ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು.

ಇದೇ ತಿಂಗಳ(ಅಕ್ಟೋಬರ್)10 ರಂದು ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಬಟನ್ ಚಾಕುವಿನಿಂದ ಸ್ವಿಗಿ ಬಾಯ್​ಗೆ ಇರಿದಿದ್ದರು. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.‌ ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಅಶೋಕ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಚುಚ್ಚಿ ಸುಲಿಗೆ: ಸಿಸಿಟಿವಿ ದೃಶ್ಯ

ಬಂಧಿತರಿಂದ ಒಂದು ಬೈಕ್, ಮೊಬೈಲ್ ಫೋನ್​​ ಹಾಗೂ ಚಾಕುವನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಇದನ್ನೂ ಓದಿ:ಹಣಕ್ಕಾಗಿ ಮಗಳನ್ನೇ ಮಾರಿದ ಪಾಪಿ ತಂದೆ.. ಬಾಲಕಿ ಖರೀದಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಸಂಬಂಧಿ!

ABOUT THE AUTHOR

...view details