ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ - undefined
ಬಿ.ಪ್ಯಾಕ್ನ ಹಲವು ಸದಸ್ಯರು ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಪಾಸ್ ಪೋರ್ಟ್ ಕಚೇರಿ ಬಳಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ರು.

ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ
ಬಿ.ಪ್ಯಾಕ್ನ ಹಲವು ಸದಸ್ಯರು ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಪಾಸ್ ಪೋರ್ಟ್ ಕಚೇರಿ ಬಳಿಯ ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ ಕಸವನ್ನು ತೆಗೆದು, ಆ ಸ್ಥಳದಲ್ಲಿ ಕೆಂಪು ಬಣ್ಣ ಬಳಿದು ಸ್ವಚ್ಛತೆ ಕಾಪಾಡಿಕೊಳ್ಳುವ ಮಾಹಿತಿ ಬರಹಗಳನ್ನು ಬರೆದರು.
ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ
ಯುವಕರು ಹಾಗೂ ಮಹಿಳೆಯರು ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಯೋಜಕ ನವೀನ್ ಪ್ರಕಾಶ್, ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ಘನ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಮಾಡಲಾಯಿತು.