ಆನೇಕಲ್: ಕಳೆದ ಮೂರು ತಿಂಗಳಿಂದ ಕೊರೊನಾ, ಲಾಕ್ಡೌನ್ ಕಾರಣಗಳಿಗಾಗಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರಿಗೆ ಮತ್ತು ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿ ನೀಡಿದೆ.
ಬನ್ನೇರುಘಟ್ಟ ಉದ್ಯಾನವನದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ಸುವರ್ಣ! - ಬನ್ನೇರುಘಟ್ಟದಲ್ಲಿ ಆನೆ ಮರಿ ಜನನ
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸುವರ್ಣ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿದೆ.
ಹೆಣ್ಣು ಮರಿಗೆ ಜನ್ಮ ನೀಡಿದ ಸುವರ್ಣ
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ಸುವರ್ಣ(45) ಇದೇ ಸೋಮವಾರ ಹೆಣ್ಣು ಮರಿಗೆ ಜನ್ಮ ನೀಡಿದೆ. ಸೀಗೆಕಟ್ಟೆ ಆನೆ ಬಿಡಾರದಲ್ಲಿ ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿವೆ. ತಾಯಿ ಮತ್ತು ಇತರೆ ಆನೆಗಳೊಂದಿಗೆ ಮರಿ ಆನೆ ವಿಹರಿಸುತ್ತಿದೆ.
ಇನ್ನು ತಿಂಗಳ ಹಿಂದೆ ಉದ್ಯಾನವನದ ಸಾಕಾನೆ ರೂಪಾ(12) ಸಹ ಮುದ್ದಾದ ಗಂಡು ಮರಿಗೆ ಜನ್ಮ ನೀಡಿತ್ತು. ರೂಪಾ ಆನೆಗೆ ಇದು ಎರಡನೇ ಮರಿಯಾಗಿದ್ದು, 2016 ರಲ್ಲಿ ಹೆಣ್ಣು ಮರಿ ಗೌರಿಗೆ ರೂಪಾ ಜನ್ಮ ನೀಡಿತ್ತು.