ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್ಡೌನ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದು, ಕೋವಿಡ್ ಹಾಟ್ ಸ್ಪಾಟ್ ಆಗಿರುವ ಜಿಲ್ಲೆಗಳಲ್ಲಿ ಮತ್ತೆ 14 ದಿನದ ಲಾಕ್ಡೌನ್ ಮುಂದುವರೆಸುವ ಸಾದ್ಯತೆ ಹೆಚ್ಚಾಗಿದೆ.
ಏ. 14ಕ್ಕೆ ಲಾಕ್ಡೌನ್ ಕೊನೆಗೊಳ್ಳೋದು ಅನುಮಾನ: ಸಿಎಂ ಬಿಎಸ್ವೈ ಸುಳಿವು - CM. BS Yeduyurappa Statement
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್ಡೌನ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಲಾಕ್ಡೌನ್ ಏಪ್ರಿಲ್ 14ರಂದು ವಾಪಸ್ ಪಡೆದರೆ ಇಷ್ಟು ದಿನದ ಶ್ರಮ ವ್ಯರ್ಥವಾಗಲಿದೆ. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾಗಲಿದೆ ಎನ್ನುವ ನಿಲುವಿಗೆ ಬಂದಿರುವ ಸಿಎಂ, ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಹಾಗಾಗಿ ಏಪ್ರಿಲ್ 14ಕ್ಕೆ ಲಾಕ್ಡೌನ್ ಮುಗಿಯಲಿದೆ ಎನ್ನುವ ನಿರೀಕ್ಷೆಯಲ್ಲಿರುವ ರಾಜ್ಯದ ಜನರು ಮತ್ತೊಂದಷ್ಟು ದಿನ ಮನೆಯಲ್ಲೇ ಇರಲು ಮಾನಸಿಕವಾಗಿ ಸಿದ್ಧರಾದರೆ ಒಳಿತು ಎನ್ನಲಾಗುತ್ತಿದೆ.
Last Updated : Apr 7, 2020, 1:10 PM IST