ಕರ್ನಾಟಕ

karnataka

ETV Bharat / state

ಅಬ್ದುರ್​ ಬಂಧನ ದೃಶ್ಯ ಸಿಸಿಟಿವಿಯಲ್ಲಿ ಸೆರೆ... ಶಂಕಿತ ಉಗ್ರನ ಖೆಡ್ಡಾಕ್ಕೆ ಕೆಡವಲು ಹೇಗಿತ್ತು ಎನ್​ಐಎ ಪ್ಲಾನ್? - ಬೆಂಗಳೂರಿನಲ್ಲಿ ಉಗ್ರರು

ಉಗ್ರರೊಂದಿಗೆ ನಂಟು ಹೊಂದಿರುವ ಹಿನ್ನೆಲೆ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುರ್ ರೆಹಮಾನ್ ಎಂಬಾತನನ್ನು ಎನ್​​ಐಎ ತಂಡ ಬಂಧಿಸಿದ್ದು, ತನಿಖಾದಳ ಆತನನ್ನು ಬಂಧಿಸಿ ಕರೆದೊಯ್ಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Abdur Rehman
ಶಂಕಿತ ಉಗ್ರ ಅಬ್ದುರ್ ರೆಹಮಾನ್

By

Published : Aug 19, 2020, 3:57 PM IST

Updated : Aug 19, 2020, 4:10 PM IST

ಬೆಂಗಳೂರು: ಕಣ್ಣಿನ ವೈದ್ಯನೋರ್ವನನ್ನು ಉಗ್ರರ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ರಾಷ್ಟ್ರೀಯ ತನಿಖಾದಳ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಯನ್ನು ಎನ್​​ಐಎ ತಂಡ ಬಂಧಿಸಿ ಕರೆದೊಯ್ದಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಬಸವನಗುಡಿ ಬಳಿ ಇರುವ ಅಪಾರ್ಟ್​ಮೆಂಟ್​ವೊಂದರಲ್ಲಿ‌ ಅಬ್ದುರ್​ ವಾಸವಿದ್ದ ಬಗ್ಗೆ ಮಾಹಿತಿ ಪಡೆದ ಎನ್​​ಐಎ, ಬೊಲೆರೋ ವಾಹನದಲ್ಲಿ 11ಜನರ ತಂಡವಾಗಿ ಅಪಾರ್ಟ್​ಮೆಂಟ್​​ ಬಳಿ ಬಂದಿಳಿದಿದ್ದರು. ಅಪಾರ್ಟ್ಮೆಂಟ್ ‌ಒಳಗಿನಿಂದ ಶಂಕಿತ‌ ಉಗ್ರ ಅಬ್ದುರ್ ರೆಹಮಾನ್​​ಗೆ ಸಂಬಂಧಿಸಿದ ಲ್ಯಾಪ್​ಟಾಪ್, ಮೊಬೈಲ್ ಸೇರಿದಂತೆ ದಾಖಲೆಗಳಿರುವ ಎರಡು ಬ್ಯಾಗ್ ಜಪ್ತಿ ಮಾಡಿ ಆತನ ಕೈಗೆ ಕೋಳ‌ ಹಾಕಿ ಹೊರಗಡೆ ಕರೆತರುತ್ತಿರುವುದು ಹಾಗೂ ಉಳಿದ ಅಧಿಕಾರಿಗಳು ಫೈಲ್ ಹಿಡಿದು‌ ಮನೆಯಿಂದ ಹೊರಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಶಂಕಿತ ಉಗ್ರರನ್ನ ಬಲೆಗೆ ಕೆಡವಲು ಹಲವು ತಿಂಗಳಿನಿಂದ ಪ್ಲಾನ್:

ಈ ಹಿಂದೆ ಕಾಶ್ಮೀರ ಮೂಲದ ಜಹಾನಜೈಬ್ ಶಮಿ ವಾನಿ ಹಾಗೂ ಪತ್ನಿ ಹೀನಾ ಬಶೀರ್ ಬೇಗ್ ಬಂಧನವಾಗಿತ್ತು. ಈ ದಂಪತಿ ಐಸಿಸ್ ಗಾಗಿ, ಐಎಸ್​​ಕೆಪಿ ಸಂಘಟನೆಯನ್ನು ಬೆಳೆಸುತ್ತಿದ್ದರು. ಮಾರ್ಚ್ ತಿಂಗಳಲ್ಲಿ ಇವರನ್ನು ಬಂಧಿಸಿದಾಗ ಅಬ್ದುಲ್ ರೆಹಮಾನ್ ನಂಟು ಬಯಲಾಗಿತ್ತು ಎನ್ನಲಾಗ್ತಿದೆ. ಅಂದಿನಿಂದಲೇ ಶಂಕಿತ ಉಗ್ರ ಅಬ್ದುರ್​ ಮೇಲೆ ಐಎನ್ಎ ತಂಡ ಹದ್ದಿನ ಕಣ್ಣಿಟ್ಟು, ಕಳೆದ ಕೆಲವು‌ ತಿಂಗಳಿಂದ ರಾಷ್ಟ್ರೀಯ ತನಿಖಾ ದಳದಿಂದ ಬಸವನಗುಡಿಯಲ್ಲಿ ಓಡಾಡಿ ಆತನ ಚಲನವಲನಗಳನ್ನು ಗಮನಿಸಿದ್ದರು.

ಮೂರು ದಿನಗಳ ಹಿಂದೆ ಅಕ್ಕಪಕ್ಕದ ಅಪಾರ್ಟ್ಮೆಂಟ್​​​ನ ಸಿಸಿಟಿವಿ ದೃಶ್ಯ ಕಲೆಹಾಕಿ ಶಂಕಿತ ಉಗ್ರನ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕಿ ಕಾರ್ಯಾಚರಣೆಗೆ ‌ಇಳಿದ ತಂಡ, ಆತ ಮನೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡು ಐಬಿ ಮತ್ತು ಕರ್ನಾಟಕದ ಐಎಸ್​​ಡಿ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Last Updated : Aug 19, 2020, 4:10 PM IST

ABOUT THE AUTHOR

...view details