ಕರ್ನಾಟಕ

karnataka

ETV Bharat / state

ಮನೆಯಲ್ಲೇ ಗೃಹಿಣಿ ಸಾವು: ಗಂಡನ ಸುತ್ತ ಅನುಮಾನದ ಹುತ್ತ - Doubt on husband

ಬೆಂಗಳೂರು ನಗರದ ಕೆ.ಜಿ ಹಳ್ಳಿಯಲ್ಲಿ ವಾಸವಿದ್ದ ನೀನಾದ್ ತಾಜ್ ಎಂಬಾಕೆ ಅನುಮಾನಾಸ್ಪದವಾಗಿ ಮನೆಯಲ್ಲಿ ಮೃತಪಟ್ಟಿದ್ದು, ಆಕೆಯ ಗಂಡನೇ ಕೊಲೆಗೈದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

Suspected death of a housewife

By

Published : Oct 7, 2019, 6:28 PM IST

ಬೆಂಗಳೂರು:ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆ.ಜಿ ಹಳ್ಳಿಯ ಬಳಿ‌‌ ನಡೆದಿದೆ.

ನೀನಾದ್ ತಾಜ್ ಮೃತಪಟ್ಟ ಮಹಿಳೆ. ನೀನಾದ್ ತಾಜ್, ರಜಾಕ್ ಎಂಬಾತನನ್ನ ಹತ್ತು ವರ್ಷದ ಹಿಂದೆ ‌ಮದುವೆಯಾಗಿದ್ದು, ಬೆಂಗಳೂರಿನ‌ ಕೆ.ಜಿ ಹಳ್ಳಿಯ ಬಳಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ರಜಾಕ್ ಕೌಟುಂಬಿಕ ವಿಚಾರದ ಹಿನ್ನೆಲೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.

ನೀನಾದ್ ತಾಜ್ ಹಾಗೂ ರಜಾಕ್ ದಂಪತಿ

ನಿನ್ನೆಯೂ ಸಹ ಇಬ್ಬರು ಜಗಳವಾಡಿದ್ದು, ಈ ವೇಳೆ ರಜಾಕ್, ನೀನಾದ್​​ರನ್ನು ಕೊಲೆ ಮಾಡಿ ನೇಣು ಹಾಕಿರುವ ಆರೋಪ ಕೇಳಿ ಬಂದಿದೆ.ಸದ್ಯ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details