ಬೆಂಗಳೂರು: ರಾಷ್ಟ್ರ ಕಂಡ ಪ್ರಬಲ ನಾಯಕಿ ಮತ್ತು ಅತ್ಯುತ್ತಮ ವಕ್ತಾರೆಯನ್ನು ದೇಶ ಇಂದು ಕಳೆದುಕೊಂಡು ಶೋಕಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ದೇಶ ಕಂಡ ಪ್ರಬಲ ನಾಯಕಿ, ಅತ್ಯುತ್ತಮ ವಕ್ತಾರೆ: ಸುಷ್ಮಾ ಕುರಿತು ಬಿಎಸ್ವೈ ಟ್ವೀಟ್ - Sushma Swaraj passes away
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಹಿರಿಯ ನಾಯಕಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಸುಷ್ಮಾ ಸ್ವರಾಜ್ ನಿಧನಕ್ಕೆ ಸಿಎಂ ಬಿಎಸ್ವೈ ಸಂತಾಪ
ಓರ್ವ ರಾಜಕಾರಣಿಯಾಗಿ ಅವರು ಅನೇಕ ಮಹಿಳೆಯರನ್ನು ರಾಜಕೀಯಕ್ಕೆ ಪ್ರವೇಶಿಸಲು ಪ್ರೇರೇಪಿಸಿದ್ದರು. ಅವರ ಅಗಲಿಕೆಯಿಂದ ಪಕ್ಷ ಮತ್ತು ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ, ಸದ್ಗತಿ ದೊರಕಲಿ ಎಂದು ಟ್ವೀಟ್ ಮೂಲಕ ಸಂತಾಪ ಸಂದೇಶ ಸೂಚಿಸಿದ್ದಾರೆ.
Last Updated : Aug 7, 2019, 1:05 AM IST