ಬೆಂಗಳೂರು:ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ಬೆಂಗಳೂರಿಗೆ ಆಗಮಿಸಿ ಜಿಎಸ್ಟಿ ಬಗ್ಗೆ ಸಹಕಾರಿ ಸಚಿವರಾದ ಬಂಡೆಪ್ಪ ಕಾಶಪ್ಪನವರ್ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಜುಲೈ 1 ಕ್ಕೆ ಜಿಎಸ್ಟಿ ಜಾರಿಯಾಗಿ ಎರಡು ವರ್ಷ ಆಗಲಿದೆ, ಜಿಎಸ್ಟಿಯ ಎರಡನೇ ಸಂವತ್ಸರಕ್ಕೆ ಸರಳತೆ ಹಾಗೂ ಅನುಸರಣೆಯ ಬಗ್ಗೆ ಒತ್ತು ನೀಡಲಾಗುವುದು, ಐ ಟಿ ಸಂಸ್ಥೆಗಳು ಹೊಸ ಮಾದರಿಯ ತೆರಿಗೆ ಪಾವತಿಯನ್ನು ಕಂಡುಹಿಡಿದಿದ್ದಾರೆ. ಇದೆ ಅನುಸಾರದಂತೆ ಇನ್ಫೋಸಿಸ್ ಸಂಸ್ಥೆ ತೆರಿಗೆ ಪಾವತಿ ಬಗ್ಗೆ ಪ್ರೋಟೋಟೈಪ್ಸ್ ತಯಾರಿಸಿದ್ದಾರೆ, ಅದನ್ನು ಜುಲೈ 1 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದರು.