ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮಟ್ಟ ಹಾಕಲು ಎಸಿಬಿ ಇದೀಗ ಎಲ್ಲೆಡೆ ಕಾರ್ಯಾಚರಣೆ ಮಾಡ್ತಿದೆ. ಇಂದು ಜಮೀನಿನ ಪೋಡಿ ಮಾಡಿಕೊಡಲು ಲಂಚ ಕೇಳಿದ್ದ ಸರ್ವೇಯರ್ ಅವರನ್ನ ಎಸಿಬಿ ಖೆಡ್ಡಾಕ್ಕೆ ಕೆಡವಿದೆ.
ಲಂಚ ಕೇಳಿದ ಆರೋಪ... ಸರ್ವೇಯರ್ ಎಸಿಬಿ ವಶಕ್ಕೆ - undefined
ಜಮೀನಿನ ಪೋಡಿ ಮಾಡಿಕೊಡಲು ಲಂಚ ಕೇಳಿದ ಆರೋಪದ ಮೇಲೆ ಸರ್ವೇಯರ್ ಅನ್ನು ಎಸಿಬಿ ವಶಕ್ಕೆ ಪಡೆದಿದ್ದಾರೆ. 55 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬೆಂಗಳೂರು ಉತ್ತರ ಸರ್ವೇಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚ ಕೇಳಿದ್ದ ಸರ್ವೆಯರ್ ಎಸಿಬಿ ವಶಕ್ಕೆ
ದೂರುದಾರರೊಬ್ಬರು ತಮ್ಮ ಜಮೀನಿನ ಪೋಡಿ ಮಾಡಿಸಿಕೊಳ್ಳಲು ಸರ್ವೇಯರ್ ನಾಗಪ್ಪ ಕೆ.ಪಿ, ಅವರ ಬಳಿ ಹೋಗಿದ್ದರು. ಈ ವೇಳೆ ನಾಗಪ್ಪ 55 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಹೀಗಾಗಿ ದೂರುದಾರರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಇಂದು 55 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ಕೈಗೆ ಸರ್ವೇಯರ್ ನಾಗಪ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಾಕ್ಕಿಕೊಂಡಿದ್ದಾರೆ. ನಾಗಪ್ಪರನ್ನ ವಶಕ್ಕೆ ಪಡೆದು, ಬೆಂಗಳೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.