ಬೆಂಗಳೂರು:ಪಕ್ಷ ಬಿಡುವ ಸೂಚನೆ ನೀಡಿರುವ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮನವೊಲಿಕೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮುಂದಾಗಿದ್ದು, ಮಾತುಕತೆ ನಡೆಸಿದ್ದಾರೆ.
ಸಿ.ಎಂ. ಇಬ್ರಾಹಿಂ ಮನವೊಲಿಸಲು ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಿಂದ ನೇರವಾಗಿ ಅವರ ನಿವಾಸಕ್ಕೆ ತೆರಳಿದ್ದ ಸುರ್ಜೇವಾಲಾ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರ್ಪಡೆಗೆ ಮುಂದಾಗಿರುವ ಇಬ್ರಾಹಿಂ ಅಲ್ಲಿ ರಾಜ್ಯಾಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಹಾಗಾಗಿ ಮನವೊಲಿಸಲು ಮುಂದಾದ ರಣದೀಪ್ ಸುರ್ಜೆವಾಲಾ ಪಕ್ಷದಲ್ಲಿ ಉಳಿಯುವಂತೆ ಒತ್ತಾಯಿಸಿದ್ದಾರೆ.
ಸಿ ಎಂ ಇಬ್ರಾಹಿಂ ಜೊತೆ ರಣದೀಪ್ ಸುರ್ಜೆವಾಲಾ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ 2 ಸಾರಿ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಒಂದೆರಡು ಸಾರಿ ಸಮಾಲೋಚಿಸಿದ್ದಾರೆ. ಆದರೆ ರಾಜ್ಯ ನಾಯಕರ ಮಾತಿಗೆ ಬಗ್ಗಿರಲಿಲ್ಲ. ಬೆನ್ಸನ್ ಟೌನ್ ನಲ್ಲಿರುವ ಸಿ. ಎಂ. ಇಬ್ರಾಹಿಂ ನಿವಾಸ ತಲುಪಿರುವ ಸುರ್ಜೆವಾಲಾ ನಿರಂತರ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಸಿ ಎಂ ಇಬ್ರಾಹಿಂ ಮನೆಗೆ ಬಂದ ರಣದೀಪ್ ಸುರ್ಜೆವಾಲಾ ಓದಿ:ಸಿಎಂ ಇಬ್ರಾಹಿಂ ಜ.15ರ ನಂತರ ಜೆಡಿಎಸ್ಗೆ..? ಹೀಗಿದೆ ಮೂಲಗಳ ಮಾಹಿತಿ
ಊಟಕ್ಕೆ ಬಂದಿದ್ದೆ: ಸಿಎಂ ಇಬ್ರಾಹಿಂ ಜೊತೆ ಸುದೀರ್ಘ ಸಮಾಲೋಚನೆ ಬಳಿಕ ಮಾತನಾಡಿದ ಸುರ್ಜೆವಾಲಾ, ಸಿಎಂ ಇಬ್ರಾಹಿಂ ಊಟಕ್ಕೆ ಕರೆದಿದ್ರು, ಅದಕ್ಕೆ ಬಂದಿದ್ದು. ಒಳ್ಳೆಯ ವೆಜ್ ಊಟ ಮಾಡಿಸಿದ್ದರು. ಯಾಕಂದ್ರೆ ನಾನು ಶಾಕಾಹಾರಿ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ, ಸಿಎಂ ಇಬ್ರಾಹಿಂ ಕಾಂಗ್ರೆಸ್ ಬಿಡಲ್ಲ ಅಂದರು.