ಕರ್ನಾಟಕ

karnataka

ETV Bharat / state

ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಸಿಎಂಗೆ ಸುರೇಶ್ ಕುಮಾರ್​‌ ಪತ್ರ‌ - ಸುರೇಶ್ ಕುಮಾರ್​‌

2008ರಲ್ಲಿ ಅಸ್ತಿತ್ವಕ್ಕೆ ಬಂದ ತಮ್ಮದೇ ನೇತೃತ್ವದ ನಮ್ಮ ಸರ್ಕಾರದ ಅವಧಿಯಲ್ಲಿ 1990ರಿಂದ 1995ರ ವರೆಗಿನ 5 ವರ್ಷಗಳಲ್ಲಿ ಆರಂಭವಾದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತಹ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದು ನೆರವಾಗಿಲ್ಲ, ಇದೀಗ ಈ ನಿರ್ಣಯ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

suresh-kumar-letter-to-cm
ಸಿಎಂಗೆ ಸುರೇಶ್ ಕುಮಾರ್​‌ ಪತ್ರ

By

Published : Mar 24, 2021, 10:15 PM IST

ಬೆಂಗಳೂರು: 1995 ರಿಂದ 2000ರ ವರೆಗಿನ ಅನುದಾನರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದಕ್ಕೆ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಿ ಆಯವ್ಯಯ ಚರ್ಚೆ ಸಂದರ್ಭದಲ್ಲಿ ಉತ್ತರ ನೀಡುವಾಗ ಘೋಷಿಸಬೇಕೆಂದು ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಸಮುದಾಯದವರು ಕಳೆದ ಎರಡು ವರ್ಷಗಳ ಬಜೆಟ್ ಪೂರ್ವಭಾವಿ ಇಂತಹ 685 ಪ್ರಾಥಮಿಕ, 211 ಪ್ರೌಢಶಾಲೆಗಳಿದ್ದು ಅವುಗಳನ್ನು ಅನುದಾನಕ್ಕೊಳಪಡಿಸುವ ನಿಟ್ಟಿನಲ್ಲಿ 134.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ.

ಸಿಎಂಗೆ ಸುರೇಶ್ ಕುಮಾರ್ ಬರೆದಿರುವ ಪತ್ರ

2008ರಲ್ಲಿ ಅಸ್ತಿತ್ವಕ್ಕೆ ಬಂದ ತಮ್ಮದೇ ನೇತೃತ್ವದ ನಮ್ಮ ಸರ್ಕಾರದ ಅವಧಿಯಲ್ಲಿ 1990ರಿಂದ 1995ರ ವರೆಗಿನ 5 ವರ್ಷಗಳಲ್ಲಿ ಆರಂಭವಾದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೊಳಪಡಿಸುವಂತಹ ನಿರ್ಣಯ ಕೈಗೊಳ್ಳಲಾಗಿತ್ತು. ಆ ನಂತರ ಬಂದ ಯಾವುದೇ ಸರ್ಕಾರಗಳು ಇಂತಹ ನಿರ್ಣಯವನ್ನು ಕೈಗೊಳ್ಳಲೇ ಇಲ್ಲ. ಈಗಲೂ ತಮ್ಮದೇ ನೇತೃತ್ವದಲ್ಲಿ ನಮ್ಮ ಸರ್ಕಾರದಲ್ಲಿ 1995 ರಿಂದ 2000ರ ವರೆಗಿನ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ.‌

ಶಿಕ್ಷಕರು ಯಾವುದೇ ಪ್ರತಿಭಟನೆ-ಹರತಾಳಗಳಿಗೆ ಮುಂದಾಗದೇ ಮಕ್ಕಳ ಪರೀಕ್ಷೆ ಮೌಲ್ಯಮಾಪನಗಳನ್ನು ಸಮಾಧಾನದಿಂದ ನೆರವೇರಿಸಿಕೊಡಬೇಕೆಂದು ಆಗ್ರಹಿಸಿ ಅವರ ಮನವೊಲಿಸಿದ್ದೇನೆ. ಈ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ತಮಗೆ ಸಲ್ಲಿಸಿರುವ ಪ್ರಸ್ತಾವನೆಯಂತೆ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಿ ಬಜೆಟ್ ಕುರಿತು ಚರ್ಚೆಯ ಉತ್ತರದ ಸಂದರ್ಭದಲ್ಲಿ ಘೋಷಣೆ ಮಾಡುವ ಮೂಲಕ ಶಿಕ್ಷಣ ಇಲಾಖೆಯ ಅತ್ಯಂತ ಪ್ರಮುಖ ಬೇಡಿಕೆಯನ್ನಾಗಿ ಪರಿಗಣಿಸಬೇಕೆಂದು ಕೋರಿದ್ದಾರೆ.

ಇದನ್ನೂಓದಿ:'ಸುಧಾಕರ್ ಹೇಳಿಕೆ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆ ಆಗಲಿ'

ABOUT THE AUTHOR

...view details