ಬೆಂಗಳೂರು: ಚುನಾವಣಾ ಫಲಿತಾಂಶ ಕ್ಲಾಸ್ ಮತ್ತು ಮಾಸ್ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶವನ್ನು ವ್ಯಾಖ್ಯಾನಿಸಿದ್ದಾರೆ.
ಕ್ಲಾಸ್- ಮಾಸ್ ಎರಡರಲ್ಲೂ ಬಿಜೆಪಿಗೆ ಜನಮನ್ನಣೆ: ಚುನಾವಣಾ ಫಲಿತಾಂಶ ವ್ಯಾಖ್ಯಾನಿಸಿದ ಸುರೇಶ್ ಕುಮಾರ್! - Bangalore
ಕ್ಲಾಸ್ ಮತ್ತು ಮಾಸ್ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎಂದು ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಬರೆದುಕೊಂಡು ಫಲಿತಾಂಶವನ್ನು ವ್ಯಾಖ್ಯಾನಿಸಿದ್ದಾರೆ.

ನಮ್ಮ ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೊಂದು ವಿಶಿಷ್ಟವಾದ ಫಲಿತಾಂಶವಾಗಿದೆ. ಆರ್.ಆರ್.ನಗರ ಮತ್ತು ಶಿರಾ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು, ಪಶ್ಚಿಮ ಪದವೀಧರ, ಆಗ್ನೇಯ ಪದವೀಧರ ಸೇರಿ ಎರಡು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆಗಳು, ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ ಸೇರಿ ಎರಡು ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಚುನಾವಣೆಗಳು ನಡೆದಿವೆ. ಎಲ್ಲದರಲ್ಲಿಯೂ ಬಿಜೆಪಿ ಜಯ ಗಳಿಸಿದೆ ಎಂದು ತಿಳಿಸಿದರು.
ಅಂದರೆ ಕ್ಲಾಸ್ ಮತ್ತು ಮಾಸ್ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎಂದು ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಬರೆದುಕೊಂಡು ಫಲಿತಾಂಶವನ್ನು ವ್ಯಾಖ್ಯಾನಿಸಿದ್ದಾರೆ.