ಕರ್ನಾಟಕ

karnataka

ETV Bharat / state

ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ, ಸಾಧಿಸಿ ತೋರಿಸಿದೆ : ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸೆ

ಜುಲೈ 17 ರಂದು ನಾನು ಕೊರಟಗೆರೆಯ ಗ್ರೀಷ್ಮಾಳ ಮನೆಗೆ ಧಾವಿಸಿದೆ. ಆಕೆಯನ್ನ ಕೂರಿಸಿಕೊಂಡು ಧೈರ್ಯ ಹೇಳಿದೆ. ನಿನ್ನನ್ನು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗೆ ಕೂರಿಸುವ ಜವಾಬ್ದಾರಿ ನನ್ನದು, ಚಿಂತೆ ಇಲ್ಲದೆ ಸಿದ್ಧಳಾಗು ಎಂದಿದ್ದೆ..

ಸುರೇಶ್ ಕುಮಾರ್
ಸುರೇಶ್ ಕುಮಾರ್

By

Published : Oct 11, 2021, 8:49 PM IST

ಬೆಂಗಳೂರು :ಗ್ರೀಷ್ಮಾ ನೀನು ಛಲ ಬಿಡಲಿಲ್ಲ, ಹಿಡಿದ ಹಠವನ್ನು ಸಾಧಿಸಿ ತೋರಿಸಿದೆ. ಇತರರಿಗೆ ನೀನೊಂದು ಉತ್ತಮ ಉದಾಹರಣೆ ಎಂದು ಎಸ್​ಎಸ್​ಎಲ್​ಸಿ ಟಾಪರ್ ಗ್ರೀಷ್ಮಾಗೆ ಶಿಕ್ಷಣ ಖಾತೆಮಾಜಿ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ.

ಮೂಡಬಿದರಿಯ ಆಳ್ವಾಸ್ ​ ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ಫೀಸ್ ಕಟ್ಟಿಲ್ಲ ಅಂತಾ ಎಕ್ಸಾಂ ನೋಂದಣಿ ಮಾಡಿರಲಿಲ್ಲ. ನೋಂದಣಿ ಮಾಡದ ಹಿನ್ನೆಲೆ ಮುಖ್ಯ ಪರೀಕ್ಷೆಯಿಂದ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ ವಂಚಿತರಾಗಿದ್ದರು. ಆದರೆ, ಸೆಪ್ಟೆಂಬರ್​ನಲ್ಲಿ ನಡೆದ ಪೂರಕ ಪರೀಕ್ಷೆಗೆ ಹಾಜರಾಗಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ.

ಪೂರಕ ಪರೀಕ್ಷೆಯಲ್ಲಿ ಆಕೆ 625 ಅಂಕಗಳಿಗೆ 599 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತು ಮಾಜಿ ಸಚಿವ ಸುರೇಶ್ ಕುಮಾರ್ ಆ ದಿನ ನಡೆದ ಘಟನೆಯನ್ನ ನೆನಪಿಸಿಕೊಳ್ಳುವುದರ ಜತೆಗೆ ಆಕೆಗೆ ಶುಭಾಶಯ ತಿಳಿಸಿದ್ದಾರೆ.

ಅಂದು ಹತ್ತನೆಯ ತರಗತಿಗೆ ವಿದ್ಯಾರ್ಥಿನಿಯ ದಾಖಲಾತಿಯೇ ಆಗಿರಲಿಲ್ಲ. ಹೀಗಾಗಿ, ಗ್ರೀಷ್ಮಾಗೆ ಎಸ್​ಎಸ್​ಎಲ್​ಸಿ ಪರೀಕ್ಷೆಯ ಹಾಲ್ ಟಿಕೆಟ್ ದೊರಕಿರಲಿಲ್ಲ. ತೀವ್ರವಾಗಿ ನೊಂದ ಗ್ರೀಷ್ಮಾ ಒಂದು ಅನಾಹುತಕ್ಕೆ ಕೈ ಹಾಕಿದ್ದಳು.

ಜುಲೈ 17 ರಂದು ನಾನು ಕೊರಟಗೆರೆಯ ಗ್ರೀಷ್ಮಾಳ ಮನೆಗೆ ಧಾವಿಸಿದೆ. ಆಕೆಯನ್ನ ಕೂರಿಸಿಕೊಂಡು ಧೈರ್ಯ ಹೇಳಿದೆ. ನಿನ್ನನ್ನು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗೆ ಕೂರಿಸುವ ಜವಾಬ್ದಾರಿ ನನ್ನದು, ಚಿಂತೆ ಇಲ್ಲದೆ ಸಿದ್ಧಳಾಗು ಎಂದಿದ್ದೆ.

ಇದನ್ನೂ ಓದಿ: ಪರೀಕ್ಷೆ ಬರೆಯಲು ಅವಕಾಶ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಇಂದು ರಾಜ್ಯಕ್ಕೆ ಟಾಪರ್

ನನ್ನ ಶಿಕ್ಷಣ ಸಚಿವ ಸ್ಥಾನ ಹೋದ ನಂತರವೂ ಆಯುಕ್ತರು, ಎಸ್​ಎಸ್​ಎಲ್​ಸಿ ಮಂಡಳಿ ನಿರ್ದೇಶಕರು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಗ್ರೀಷ್ಮಾಳಿಗೆ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಿಸುವುದರಲ್ಲಿ ಯಶಸ್ವಿಯಾದೆ. ಇಂದು ಫಲಿತಾಂಶ ತಿಳಿದಾಗ ನನ್ನ ಮನ ನಿರಾಳವಾಯಿತು ಎಂದರು.

ABOUT THE AUTHOR

...view details