ಬೆಂಗಳೂರು: 2.3 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನೀಡಿದ್ದ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಕಳೆದ ಮಾರ್ಚ್ 12ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ನಾನೂ ಚೌಕಿದಾರ ಅಭಿಯಾನಕ್ಕೆ ಸಂದ ಜಯ ಎಂದು ಬಿಜೆಪಿ ರಾಜ್ಯ ಸಹವಕ್ತಾರ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ವಕ್ಫ್ ಕುರಿತು ಸುಪ್ರೀಂ ತೀರ್ಪು ಚೌಕಿದಾರ್ ಅಭಿಯಾನಕ್ಕೆ ಸಂದ ಜಯ: ಮಾಣಿಪ್ಪಾಡಿ - undefined
ವಕ್ಫ್ ಆಸ್ತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನೀಡಿದ್ದ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಕಳೆದ ಮಾರ್ಚ್ 12ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಚೌಕಿದಾರ್ ಅಭಿಯಾನಕ್ಕೆ ಸಂದ ಜಯ ಎಂದು ಬಿಜೆಪಿ ರಾಜ್ಯ ಸಹವಕ್ತಾರ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
![ವಕ್ಫ್ ಕುರಿತು ಸುಪ್ರೀಂ ತೀರ್ಪು ಚೌಕಿದಾರ್ ಅಭಿಯಾನಕ್ಕೆ ಸಂದ ಜಯ: ಮಾಣಿಪ್ಪಾಡಿ](https://etvbharatimages.akamaized.net/etvbharat/images/768-512-2841811-969-c49509fd-d603-455a-8247-63bd3c5c7e8b.jpg)
ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2013ರಿಂದ ನಾನು ಹೋರಾಟ ಮಾಡುತ್ತಿದ್ದೇನೆ. ಹೈಕೋರ್ಟ್ನಲ್ಲಿ ಎರಡು ಬಾರಿ ನಮ್ಮ ಪರವಾಗಿ ತೀರ್ಪು ಬಂದಿದೆ. ಕೊನೆಗೆ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಮೇಲ್ಮನವಿ ಅರ್ಜಿ ವಜಾ ಮಾಡಿದೆ. ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಸರ್ಕಾರ ನಮ್ಮ ವರದಿಯಲ್ಲಿ ಸ್ಪಷ್ಟಪಡಿಸಿರುವಂತೆ ಒತ್ತುವರಿಯಾಗಿರುವ ಎಲ್ಲ ವಕ್ಫ್ ಆಸ್ತಿಗಳನ್ನು ಮರು ವಶ ಮಾಡಿಕೊಳ್ಳಲೇಬೇಕಾಗಿದೆ. ಈ ಸರ್ಕಾರವನ್ನು ತಕ್ಷಣವೇ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ ಎಂದರು.
ವಕ್ಫ್ ಬೋರ್ಡ್ಗೆ ಸೇರಿದ ಭೂಮಿ ಕಬಳಿಕೆ ಆರೋಪ ಪ್ರಕರಣದಲ್ಲಿ ಗಣ್ಯವಕ್ತಿಗಳೇ ಸೇರಿದ್ದಾರೆ. ರಾಜಕಾರಣಿಗಳು ವಕ್ಫ್ ಮಂಡಳಿಗೆ ಸೇರಿದವರೂ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಧರಂಸಿಂಗ್, ರೋಷನ್ ಬೇಗ್, ಹ್ಯಾರಿಸ್ ಸೇರಿ ಹಲವರು ಭಾಗಿಯಾಗಿದ್ದಾರೆ. ವಿಂಡ್ಸರ್ ಮ್ಯಾನರ್ ಒಂದೂವರೆ ಸಾವಿರ ಕೋಟಿ ಬೆಲೆ ಬಾಳಲಿದೆ. ಬೆಲ್ಲಹಳ್ಳಿಯಲ್ಲಿ 602 ಎಕರೆ ಜಾಗವಿದ್ದು, ಮೂರು ಎಂಜಿನಿಯರಿಂಗ್ ಕಾಲೇಜು ಸಿ.ಕೆ. ಜಾಫರ್ ಷರೀಫ್ ಅವರದ್ದಾಗಿದೆ. ಕಸ್ತೂರು ದರ್ಗಾ, ಸಿ.ಎಂ. ಇಬ್ರಾಹಿಂ ಅವರದ್ದಾಗಿದ್ದು, ಯಲಹಂಕದಲದಲಿ 4 ಸಾವಿರ ಎಕರೆ ಜಾಗ ವಕ್ಫ್ ಬೋರ್ಡ್ನಿಂದ ಕೈ ತಪ್ಪಿದೆ. ಇದರಲ್ಲಿ ಭಾರೀ ದೊಡ್ಡ ಭ್ರಷ್ಟಾಚಾರ ನಡೆದಿದ್ದು, ಹೋರಾಟ ಮುಂದುವರೆಸುತ್ತೇವೆ ಎಂದರು.