ಕರ್ನಾಟಕ

karnataka

ETV Bharat / state

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಫೋಟೋ ದುರ್ಬಳಕೆ! - official language

ಕನ್ನಡ ಭಾಷಾಭಿಮಾನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಯಾಕೆ ಹೀಗೆ ಮಾಡುತ್ತಾರೋ ನನಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Supreme Court Retired Justice Santosh Hegde Photo Misuse
ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಫೋಟೋ ದುರ್ಬಳಕೆ

By

Published : Sep 14, 2020, 11:27 PM IST

ಬೆಂಗಳೂರು :ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಪ್ರಕಟಿಸುವ ಉದ್ದೇಶದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನ್ಯಾ. ಸಂತೋಷ್ ಹೆಗ್ಡೆ ಅವರ ಫೋಟೋವೊಂದು ಹರಿದಾಡುತ್ತಿದೆ. ಅದರಲ್ಲಿ ಹೆಗ್ಡೆ ಅವರು ಟಿ-ಶರ್ಟ್ ಧರಿಸಿದ್ದು, ಅದರ ಮೇಲೆ "ನಾವು ಕನ್ನಡಿಗರು, ಹಿಂದಿ ಕಲಿಯಲ್ಲ ಏನಿವಾಗ?" ಎಂಬ ಬರಹವಿದೆ.

ಈ ಕುರಿತು ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿರುವ ಅವರು, ಫೋಟೋದಲ್ಲಿರುವ ಮುಖ ನನ್ನದೇ. ಆದರೆ, ನಾನು ಆ ಟಿ-ಶರ್ಟ್ ಧರಿಸಿಲ್ಲ. ಫೋಟೋ ಶಾಪ್​ ಮೂಲಕ ಹೀಗೆ ಮಾಡಿರಬಹುದು. ಯಾಕೆ ಹೀಗೆ ಮಾಡುತ್ತಾರೋ ನನಗೆ ತಿಳಿದಿಲ್ಲ ಎಂದಿದ್ದಾರೆ.

ಇನ್ನು ಹಿಂದಿ ಭಾಷೆ ಹೇರಿಕೆ ಕುರಿತು ಮಾತನಾಡಿದ ನ್ಯಾ. ಸಂತೋಷ್ ಹೆಗ್ಡೆ, ನಮ್ಮ ರಾಜ್ಯದಲ್ಲಿ ಕನ್ನಡವೇ ಎಲ್ಲವೂ ಆಗಿದೆ. ಹಿಂದಿ ಹೇರಿಕೆ ಮಾಡುವುದು ತಪ್ಪು. ಇಷ್ಟವಿದ್ದವರು ಅದನ್ನು ಕಲಿಯಲಿ, ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಸರಿಯಲ್ಲ. ಅದನ್ನು ಒಪ್ಪುವುದೂ ಸಾಧ್ಯವಿಲ್ಲ ಎಂದಿದ್ದಾರೆ.

ABOUT THE AUTHOR

...view details