ಕರ್ನಾಟಕ

karnataka

ETV Bharat / state

ಶಿಕ್ಷಣದ ಭಾಷಾ ನೀತಿ ಕುರಿತು ಸುಪ್ರೀಂ ತೀರ್ಪಿನ ಪುನರ್ ಪರಿಶೀಲನೆ ಅಗತ್ಯ: ಸಚಿವ ಸಿ.ಟಿ. ರವಿ - Minister C.T Ravi statement

ಶಿಕ್ಷಣದ ಭಾಷಾ ನೀತಿ ಪೋಷಕರ ಆಯ್ಕೆಗೆ ಬಿಟ್ಟಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದರು. ನ್ಯಾಯಾಂಗದಲ್ಲಿ ಕನ್ನಡ- ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

Minister   C.T Ravi statement
ಶಿಕ್ಷಣದ ಭಾಷ ನೀತಿ ಕುರಿತು ಸುಪ್ರೀಂ ತೀರ್ಪಿನ ಪುನರ್ ಪರಿಶೀಲನೆ ಅಗತ್ಯ:ಸಚಿವ ಸಿ.ಟಿ ರವಿ

By

Published : Jan 4, 2020, 9:41 PM IST

ಬೆಂಗಳೂರು: ಶಿಕ್ಷಣದ ಭಾಷಾ ನೀತಿ ಪೋಷಕರ ಆಯ್ಕೆಗೆ ಬಿಟ್ಟಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ

ನ್ಯಾಯಾಂಗದಲ್ಲಿ ಕನ್ನಡ- ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಕನ್ನಡದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಾಷ್ಟ್ರಕವಿ ಕುವೆಂಪು ಅವರು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳಿದ್ದು, ನಮ್ಮ ನಾಡಿನಲ್ಲೆ ಕನ್ನಡವನ್ನು ಹುಡುಕಬೇಕು ಎಂಬ ಅರ್ಥದಲ್ಲಿ ಅಲ್ಲ. ದೂರದ ದೇಶಕ್ಕೆ ಹೋದರು ನಿನ್ನತನ ಬಿಡದಿರು. ಪಕ್ಕದ ರಾಜ್ಯಕ್ಕೆ ಹೋದರು, ನೀನು ಕನ್ನಡಿಗನಾಗಿರು ಎಂಬ ಅಭಿಮಾನದಲ್ಲಿ ಹೇಳಿದ್ರು ಎಂದರು.

ಆದ್ರೆ ಈಗ ನಮ್ಮ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ರು, ಕನ್ನಡದಲ್ಲಿ ತೀರ್ಪು ಕೊಡುವುದು ವಿಶೇಷ ಸಂಗತಿ ಎಂಬ ಸ್ಥಿತಿಗೆ ನಾವು ಬಂದಿದ್ದೇವೆ. ಅಂದರೆ, ಇದನ್ನು ನಾವು ಗಂಭೀರವಾಗಿ ಅವಲೋಕಿಸಬೇಕಿದೆ. ಶಿಕ್ಷಣದ ಭಾಷಾ ನೀತಿ ಪೋಷಕರ ಆಯ್ಕೆಗೆ ಬಿಟ್ಟಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ. ಮುಂದಿನ ಪೀಳಿಗೆಯವರು ಮನೆಯಲ್ಲೂ ಕನ್ನಡ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಕನ್ನಡ ಭಾಷೆಯ ನಿರ್ಲಕ್ಷ್ಯದ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದರು.

ಅಲ್ಲದೆ ಮುಂದಿನ ದಿನಗಳಲ್ಲಿ ಅಮ್ಮಾ ಎಂದು ಕರೆಯುತ್ತಾರೆ ಎಂಬ ಕಾರಣಕ್ಕೆ ಸನ್ಮಾನ ಮಾಡಿಸಿಕೊಳ್ಳುವ ಸ್ಥಿತಿ ಬಂದು ಬಿಡಬಹುದು. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪುನರ್ ಪರಿಶೀಲನೆ ಮಾಡುವುದಕ್ಕೆ ಅರ್ಜಿ ಸಲ್ಲಿಸಬೇಕಾದಂತಹ ಅವಶ್ಯಕತೆಯಿದೆ. ಇಲ್ಲದಿದ್ರೆ ಯಾವುದೇ ಕಾರಣಕ್ಕೂ ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಉಳಿಗಾಲವಿಲ್ಲ. ನೀಲಗಿರಿ ಬುಡದಲ್ಲಿ ಬೇರೆ ಗಿಡಗಳು ಹೇಗೆ ಹುಟ್ಟೋದಿಲ್ಲ ಎಂಬ ಮಾತಿನಂತೆ ಇಂಗ್ಲೀಷ್‌ ಭಾಷೆ ಕೆಳಗೆ ಬೇರೆ ಭಾಷೆ ಉಳಿಯದ ಸ್ಥಿತಿಗೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ರು.

ABOUT THE AUTHOR

...view details