ಬೆಂಗಳೂರು: ಮಧ್ಯಪ್ರದೇಶ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಡಿಸೆಂಬರ್ 14 ರಂದು ನಡೆಸಿದ ಸಭೆಯಲ್ಲಿ ಈ ಶಿಫಾರಸು ನಿರ್ಣಯ ಕೈಗೊಂಡಿದೆ. ನ್ಯಾ.ಸತೀಶ್ ಚಂದ್ರ ಶರ್ಮಾ ಅವರು ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1961ರ ನ.30ರಂದು ಭೋಪಾಲ್‌ನಲ್ಲಿ ಜನಿಸಿರುವ ಅವರು, 1981 ರಲ್ಲಿ ಡಾ. ಹರಿಸಿಂಗ್ ಗೌರ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿಗೆ ಪ್ರವೇಶ ಪಡೆದಿದ್ದರು. 1984 ರ ಸೆ.1 ರಂದು ವಕೀಲಿಕೆ ಆರಂಭಿಸಿದ್ದರು.