ಕರ್ನಾಟಕ

karnataka

ETV Bharat / state

ಪಾಕ್​ ಸೇನೆ ಹೊಗಳಿರುವ ವಿಡಿಯೊಗೆ 'ವಾವ್​ ಸೂಪರ್​' ಅಂದ ಬೆಂಗಳೂರು ಹುಡ್ಗ.. ನೆಟ್ಟಿಗರ ಆಕ್ರೋಶ - undefined

ಕೆಲ ಕಿಡಿಗೇಡಿ ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಆರ್ಮಿ ಹೊಗಳಿ ವಿಡಿಯೋ ಸಾಂಗ್ ಅ​​ಪ್​​​ಲೋಡ್ ಮಾಡಿದ್ದು ಈಗ ಸಾರ್ವಜನಿಕರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ಆರ್ಮಿ ಸಾಂಗ್ ಬೆಂಬಲಿಸಿದ ಪುಂಡರು.

By

Published : Mar 26, 2019, 7:37 PM IST

ಬೆಂಗಳೂರು :ಫುಲ್ವಾಮ ದಾಳಿ‌ ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಕಿಡಿಗೇಡಿಗಳು ದೇಶದ್ರೋಹಿ ಕಾಮೆಂಟ್​​ಗಳನ್ನ ಸಾಮಾಜಿಕ‌ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು.

ಇಂತವರನ್ನ ನಗರ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಹೆಡೆಮುರಿ ಕಟ್ಟಿದ್ದರು. ಆದರೆ ಇದೀಗ ಮತ್ತೊಮ್ಮೆ ದೇಶದ್ರೋಹಿಗಳ ಉದ್ಧಟತನ ಬೆಳಕಿಗೆ ಬಂದಿದೆ. ಅತಿಫ್ ಅಸ್ಲಾಂ ಎಂಬಾತ ಪಾಕ್ ಆರ್ಮಿ ಹೊಗಳಿ ವಿಡಿಯೋ ಸಾಂಗ್ ಅ​​ಪ್​​​ಲೋಡ್ ಮಾಡಿದ್ದ.

ಈ ವಿಡಿಯೊಗೆ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಜಾವಿದ್ ಬೇಗ್ ಕಾಮೆಂಟ್ ಹಾಕಿ‌ ವಾವ್ ಸೂಪರ್, ಐ ಲವ್ ಸಾಂಗ್​​​​​ ಎಂದು ಕಾಮೆಂಟ್ ಮಾಡಿದ್ದೆನೆ. ಇನ್ನು ಕಮೆಂಟ್‌ನೋಡಿದ ಸಾರ್ವಜನಿಕರು ಡಿಲಿಟ್ ಮಾಡುವಂತೆ ಬುದ್ದಿ ಮಾತು ಹೇಳಿದ್ದಾರೆ.

ಈ ವೇಳೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ದಟತನ ತೊರಿದ್ದಾನೆ. ಈ ಹಿನ್ನೆಲೆ ಪೊಲೀಸರಿಗೆ ದೂರು ನೀಡಲು ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details