ಬೆಂಗಳೂರು: ಕೊರೊನಾ ಹರಡುವಿಕೆ ತಡೆಗಟ್ಟಲು ಮೇ, 17 ರ ವರೆಗೆ ಲಾಕ್ಡೌನ್ ಮುಂದುವರಿಸಲಾಗಿತ್ತು. ಈ ಹಿನ್ನೆಲೆ ಬಿಎಂಟಿಸಿ ಬಸ್ಗಳ ಸಂಚಾರವನ್ನು ಸಾರ್ವಜನಿಕರಿಗೆ ನಿಷೇಧ ಮಾಡಲಾಗಿತ್ತು. ಇದೀಗ ಇದೇ ಭಾನುವಾರ ಲಾಕ್ಡೌನ್ ಮುಕ್ತಾಯವಾಗಲಿದ್ದು, ಅಗತ್ಯ ಸೇವೆಗೆ ಸೇರುವ ಬಿಎಂಟಿಸಿ ಸಿಬ್ಬಂದಿಯನ್ನ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಭಾನುವಾರ ಲಾಕ್ಡೌನ್ ಮುಕ್ತಾಯ : ಬಿಎಂಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ - lockdown news
ಭಾನುವಾರ ಲಾಕ್ಡೌನ್ ಮುಕ್ತಾಯವಾಗಲಿದ್ದು, 32 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಸುತ್ತೋಲೆ ಹೊರಡಿಸಿದ್ದು, ಎಲ್ಲ ನೌಕರರು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.
ಬಿಎಂಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ
ಕಂಡಕ್ಟರ್, ಚಾಲಕರು ಸೇರಿದಂತೆ ಅಧಿಕಾರಿಗಳು ಕೂಡ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. 32 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ನೌಕರರು ಸೋಮವಾರದಿಂದ ಕರ್ತವ್ಯ ಹಾಜರಾಗಬೇಕಾಗಿದೆ.
ಇನ್ನು ಸೋಮವಾರದಿಂದ ಬಸ್ಗಳು ರಸ್ತೆಗಿಳಿಯಲು ಸಜ್ಜಾಗಲಿದ್ಯಾ, ಯಾವ ರೀತಿ ಸೇವೆ ಒದಗಿಸಲು ನಿಗಮ ತಯಾರಿ ನಡೆಸಿದೆ ಎಂಬ ಮಾಹಿತಿ ಭಾನುವಾರ ಹೊರಬೀಳಲಿದೆ. ಈಗಾಗಲೇ ಕರ್ತವ್ಯಕ್ಕೆ ಹಾಜರಾಗುತ್ತಿರುವವರಿಗೆ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ.