ಕರ್ನಾಟಕ

karnataka

ETV Bharat / state

ಸಂಡೇ ಲಾಕ್ ಡೌನ್: ಬೆಳಗಿನ ಪೂಜೆ ಸಲ್ಲಿಸಿ ದೇವಾಲಯಗಳನ್ನ ಬಂದ್ ಮಾಡಿದ ಅರ್ಚಕರು - ಬೆಂಗಳೂರು ದೇವಾಲಯಗಳು ಬಂದ್ ಸುದ್ದಿ

ಲಾಕ್ ಡೌನ್ ಹಾಗೂ ಕೊರೊನಾ ಭೀತಿ ಹಿನ್ನೆಲೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ. ಬೆಳಗ್ಗೆ 7:30 ಕ್ಕೆ ಪೂಜೆ ಸಲ್ಲಿಸಿ, ದೇವಾಲಯಗಳನ್ನು ಬಂದ್​ ಮಾಡಲಾಗಿದೆ‌.

ದೇವಾಲಯಗಳು ಬಂದ್
ದೇವಾಲಯಗಳು ಬಂದ್

By

Published : Jul 5, 2020, 11:32 AM IST

ಬೆಂಗಳೂರು: ಸಂಡೇ ಲಾಕ್ ಡೌನ್ ಹಿನ್ನೆಲೆ ನಗರದ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ಪೂಜೆ ಸಲ್ಲಿಸಿ ದೇವಸ್ಥಾನಗಳ ಬಾಗಿಲು ಬಂದ್ ಮಾಡಲಾಗಿದೆ.

ಲಾಕ್ ಡೌನ್ ಹಾಗೂ ಕೊರೊನಾ ಭೀತಿ ಹಿನ್ನೆಲೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ. ಬೆಳಗ್ಗೆ 7:30 ಕ್ಕೆ ಪೂಜೆ ಸಲ್ಲಿಸಿ, ದೇವಾಲಯಗಳ ಬಾಗಲಿ ಮುಚ್ಚಲಾಗಿದೆ. ಗುರುಪೂರ್ಣಮಿ ಹಾಗೂ ಚಂದ್ರಗ್ರಹಣ‌ಕ್ಕೆ ಇಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಹೀಗಾಗಿ ಬೆಳಗ್ಗೆಯೇ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ದಿನನಿತ್ಯದ ಪೂಜೆ ಸಲ್ಲಿಸಲಾಯಿತು. ಬಳಿಕ ಬಾಗಿಲು ಹಾಕಿ ಲಾಕ್ ಡೌನ್‌ಗೆ ಬೆಂಬಲ ವ್ಯಕ್ತಪಡಿಸಲಾಗಿದೆ.

‌ಇತ್ತ ನಗರದ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಾಲಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲೂ ಕೆಲವರಿಗೆ ಮಾತ್ರ ಪೂಜೆಗೆ ಅವಕಾಶ ನೀಡಿ, ಬಳಿಕ ಬಾಗಿಲು ಮುಚ್ಚಲಾಯಿತು.

ABOUT THE AUTHOR

...view details