ಕರ್ನಾಟಕ

karnataka

ETV Bharat / state

ನಾಳೆ ಸಂಪೂರ್ಣ ಲಾಕ್​ಡೌನ್​​... ಬೆಂಗಳೂರಲ್ಲಿ ನಿಯಮ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ - ಭಾನುವಾರ ಬೆಂಗಳೂರು ಲಾಕ್​ಡೌನ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಎಂ ಆದೇಶದಂತೆ ಇಂದು ಸಂಜೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಕಂಪ್ಲೀಟ್ ಲಾಕ್​ಡೌನ್ ಇರಲಿದೆ. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ.

ಲಾಕ್​ಡೌನ್
ಲಾಕ್​ಡೌನ್

By

Published : Jul 4, 2020, 3:23 PM IST

ಬೆಂಗಳೂರು:ನಗರದಲ್ಲಿ ಪ್ರತಿದಿನ ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತೀ ಭಾನುವಾರ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಎಂ ಆದೇಶದಂತೆ ಇಂದು ಸಂಜೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಕಂಪ್ಲೀಟ್ ಲಾಕ್​ಡೌನ್ ಇರಲಿದೆ. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ.

ಮಾಂಸದ ಅಂಗಡಿ, ಹಣ್ಣು-ತರಕಾರಿ ಅಂಗಡಿಗಳು ತೆರೆದಿರಲಿವೆ. ಈ ಲಾಕ್​ಡೌನ್ ಅವಧಿಯಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವ ಸಂದರ್ಭ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಓಡಾಟ ಮಾಡಬಾರದು. ಪೊಲೀಸ್​, ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅನಗತ್ಯ ಓಡಾಟ ಮಾಡಿದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಕೋವಿಡ್ ಸೋಂಕು ಹರಡುವಿಕೆ ತಡೆಯಲು ಈ ಲಾಕ್​ಡೌನ್ ಯಶಸ್ವಿ ಮಾಡಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.

ABOUT THE AUTHOR

...view details