ನಿನ್ನೆ ಹೊರಬಿದ್ದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಒಂದು ಲಕ್ಷಕ್ಕೂ ಹೆಚ್ಚಿನ ಮತದಿಂದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮಂಡ್ಯದಲ್ಲಿ ಸಮಾವೇಶ ನಡೆಸಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ: ಸುಮಲತಾ ಅಂಬರೀಶ್ - undefined
ಕಡೆಗೂ ಸ್ವಾಭಿಮಾನವೇ ದೊಡ್ಡದು ಎಂದು ಮಂಡ್ಯ ಜನರು ತೋರಿಸಿದ್ದಾರೆ. ಮೇ 29 ರಂದು ಮಂಡ್ಯದಲ್ಲಿ ಅಂಬಿ ಹುಟ್ಟುಹಬ್ಬದಂದು ಸಮಾವೇಶ ನಡೆಸುವ ಮೂಲಕ ನನ್ನನ್ನು ಗೆಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನನ್ನು ಅವಮಾನಿಸಿದವರಿಗೆ ಫಲಿತಾಂಶ ಆಶ್ಚರ್ಯ ತಂದಿದೆ. ಕಾಂಗ್ರೆಸ್ನಿಂದ ಟಿಕೆಟ್ ಕೇಳಿದರೂ ನನಗೆ ಸಿಗಲಿಲ್ಲ. ನನ್ನನ್ನು ಸೋಲಿಸಲು ನಾನಾ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಹಣದ ಹೊಳೆ ಹರಿಸಿದರೂ ಮಂಡ್ಯ ಜನರು ಸ್ವಾಭಿಮಾನಕ್ಕೆ ವೋಟು ನೀಡಿದ್ದಾರೆ. ನನ್ನ ಗೆಲುವಿನ ಕಾರಣರಾದವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಮೇ 29 ರಂದು ಮಂಡ್ಯದಲ್ಲೇ ಅಂಬರೀಶ್ ಹುಟ್ಟುಹಬ್ಬ ಆಚರಿಸುತ್ತೇನೆ. ಸಮಾವೇಶ ಮಾಡಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.