ಬೆಂಗಳೂರು: ಬಿಗ್ ಬಾಸ್ ಸೀಸನ್ 7ರ ಆರನೇ ವಾರದಲ್ಲಿ ಸುಜಾತ ಎಲಿಮಿನೇಟ್ ಆಗಿದ್ದಾರೆ. ಒಂದೂವರೆ ತಿಂಗಳು ಬಿಗ್ ಬಾಸ್ ಮನೆಯಲ್ಲಿದ್ದ ಸುಜಾತಾ ಅವರು ಹಿಂದಿರುಗಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ಕೂಡಲೇ ಕಿಚನ್ ಜವಾಬ್ದಾರಿ ವಹಿಸಿಕೊಂಡಿದ್ದ ಸುಜಾತಾ, ಹಲವರಿಗೆ ಕಠಿಣ, ಕೆಲವರಿಗೆ ಆಪ್ತರಾಗಿದ್ದರು.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 5 ಸದಸ್ಯರು ನಾಮಿನೇಟ್ ಆಗಿದ್ದರು. ದೀಪಿಕಾ ದಾಸ್, ಸುಜಾತಾ, ಕಿಶನ್, ಚಂದನ್ ಆಚಾರ್ ಹಾಗೂ ಕುರಿ ಪ್ರತಾಪ್ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದರು. ವಿಶೇಷ ಎಂದರೆ ಸುಜಾತ ಅವರಿಗೆ ಆಪ್ತರಾಗಿದ್ದ ಜೈ ಜಗದೀಶ್ ಅವರೇ ಮನೆಯಿಂದ ಹೊರ ಹೋಗುವಾಗ ಸುಜಾತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.