ಆನೇಕಲ್: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡ ರುಂಡ - ಮುಂಡ ಬೇರ್ಪಟ್ಟ ಘಟನೆ ಆನೇಕಲ್ ಸಮೀಪದ ಅರವಂಟಿಗೆಪುರ ರೈಲ್ವೆ ಹಳಿ ಬಳಿ ನಡೆದಿದೆ.
ಮಾನಸಿಕ ಖಿನ್ನತೆಯಿಂದ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ - ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಸಮೀಪದ ಅರವಂಟಿಗೆಪುರ ರೈಲ್ವೆ ಹಳಿ ಬಳಿ ನಡೆದಿದೆ.
ಯುವಕ ಆತ್ಮಹತ್ಯೆ
ಆನೇಕಲ್ ತಾಲೂಕಿನ ಮಾಯಸಂದ್ರ ನಿವಾಸಿ ಸುನೀಲ್ ಇಂಜಿನಿಯರಿಂಗ್ ಮುಗಿಸಿ ಮನೆಯಲ್ಲಿಯೇ ಇದ್ದು, ಯಾರ ಜೊತೆಗೂ ಹೆಚ್ಚು ಮಾತನಾಡದ ಯುವಕ ಒಬ್ಬಂಟಿಯಾಗಿರುತ್ತಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಯುವಕ ನಿನ್ನೆ ತಡ ರಾತ್ರಿ ರೈಲಿಗೆ ಸಿಲುಕಿದ್ದು, ಇಂದು ಬೆಳಗ್ಗೆ ರೈಲ್ವೆ ಬಳಿ ರುಂಡ ಮುಂಡ ಬೇರಾದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.