ಬೆಂಗಳೂರು:ಓದಲು ಕಷ್ಟವಾಗುತ್ತದೆ ಎಂದು ನೊಂದು ಓಮನ್ ದೇಶದ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಮನ್ ದೇಶದ ಅಬ್ದುಲ್ ಅಜೀರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಬ್ದುಲ್ ಅಜೀರ್ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ.
ಓದಲು ಕಷ್ಟವಾಗುತ್ತೆಂದು ಸೂಸೈಡ್ ಮಾಡಿಕೊಂಡ ವಿದೇಶಿ ಪ್ರಜೆ - ಓಮನ್ ದೇಶದ ಅಬ್ದುಲ್ ಅಜೀರ್ ಎಂಬ ವಿದ್ಯಾರ್ಥಿ
ಓಮನ್ ದೇಶದ ಅಬ್ದುಲ್ ಅಜೀರ್ ಎಂಬ ವಿದ್ಯಾರ್ಥಿ ಓದಲು ಕಷ್ಟವಾಗುತ್ತದೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಬ್ದುಲ್ ಅಜೀರ್ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ.
ಬಾಗಲೂರು ಪೊಲೀಸ್ ಠಾಣೆ
ಆತನಿಗೆ ವ್ಯಾಸಂಗ ಮಾಡಲು ಕಷ್ಟವಾಗುತ್ತಿತ್ತು. ಇದರಿಂದ ನೊಂದು ಸ್ನೇಹಿತರ ಬಳಿ ತನ್ನ ನೋವು ಹಂಚಿಕೊಳ್ಳುತ್ತಿದ್ದ. ಮೇ. 21ರಂದು ರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇ. 22ರಂದು ರಾತ್ರಿವರೆಗೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಆತಂಕಗೊಂಡ ಇತರ ವಿದ್ಯಾರ್ಥಿಗಳು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಠಾಣೆಯಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಮತ್ತೆ ಬಂಧಿಸಿದ ಶಿವಮೊಗ್ಗ ಪೊಲೀಸರು