ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ : ಸಿಎಂ ಬೊಮ್ಮಾಯಿ - ಅಗ್ನಿಪಥ್​​ ಯೋಜನೆ ಖಂಡಿಸಿ ದೇಶದ ಹಲವು ಕಡೆ ಪ್ರತಿಭಟನೆ

ಅಗ್ನಿಪಥ್​ ಯೋಜನೆಯನ್ನು ಸದುದ್ದೇಶದಿಂದ ಮಾಡಲಾಗಿದೆ. 17-21 ವರ್ಷ ಕಲಿಯುವ ವರ್ಷ. ಅಲ್ಲಿ ತರಬೇತಿ ಪಡೆದು ಬಂದರೆ ಹೊರಗೆ ವಿಫುಲ ಅವಕಾಶ ಸಿಗಲಿದೆಯ, 21 ವರ್ಷಕ್ಕೆ ಯುವಕರು ತರಬೇತಿ ಪಡೆದರೆ ಯುವ ಶಕ್ತಿ ಸದ್ಬಳಕೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದರೆ, ಈಗ ಯೋಜನೆಗೆ ಕೆಲ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರದಿಂದ ಇನ್ನಷ್ಟು ಸ್ಪಷ್ಟೀಕರಣ ಬರಲಿದೆ. ಬಂದಾಗ ನೋಡೋಣ ಎಂದು ಅಗ್ನಿಪಥ್​ ಯೋಜನೆ ಬಗ್ಗೆ ಸಿಎಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು..

ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ ಎಂದ ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ ಎಂದ ಸಿಎಂ ಬೊಮ್ಮಾಯಿ

By

Published : Jun 17, 2022, 6:17 PM IST

Updated : Jun 17, 2022, 7:11 PM IST

ಬೆಂಗಳೂರು: ಅಗ್ನಿಪಥ್​​ ಯೋಜನೆ ಖಂಡಿಸಿ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರವಹಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದ ಕೆಲ ರಾಜ್ಯಗಳ ನಂತರ ನೆರೆಯ ತೆಲಂಗಾಣಕ್ಕೂ ಗಲಭೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಕಾನೂನು ಸುವ್ಯವಸ್ಥೆ ಎಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದ್ದು, ರಾಜ್ಯದಲ್ಲಿ ಗಲಭೆ, ಗೊಂದಲಗಳು ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಲೇ ಬರಲಾಗುತ್ತಿದೆ. ಈಗಲೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಲಿದ್ದಾರೆ ಎಂದರು.

ಅಗ್ನಿಪಥ್​ ಯೋಜನೆಯನ್ನು ಸದುದ್ದೇಶದಿಂದ ಮಾಡಲಾಗಿದೆ. 17-21 ವರ್ಷ ಕಲಿಯುವ ವರ್ಷ, ಅಲ್ಲಿ ತರಬೇತಿ ಪಡೆದು ಬಂದರೆ ಹೊರಗೆ ವಿಫುಲ ಅವಕಾಶ ಸಿಗಲಿದೆ. 21 ವರ್ಷಕ್ಕೆ ಯುವಕರು ತರಬೇತಿ ಪಡೆದರೆ ಯುವ ಶಕ್ತಿ ಸದ್ಬಳಕೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದರೆ, ಈಗ ಯೋಜನೆಗೆ ಕೆಲ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರದಿಂದ ಇನ್ನಷ್ಟು ಸ್ಪಷ್ಟೀಕರಣ ಬರಲಿದೆ. ಬಂದಾಗ ನೋಡೋಣ ಎಂದು ಅಗ್ನಿಪಥ್​ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಕರ್ನಾಟಕದ ಯೋಜನೆಯ ಡಿಪಿಆರ್​​ಗೆ ಆದಷ್ಟು ಬೇಗ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಸಭೆಯಲ್ಲಿ ಮೇಕೆದಾಟು ವಿಷಯ ಇಟ್ಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ : ಸಿಎಂ ಬೊಮ್ಮಾಯಿ

ಭದ್ರಾ ಮೇಲ್ದಂಡೆ ಯೋಜನೆಗೆ ಆರ್ಥಿಕ ಇಲಾಖೆ ಅನುಮೋದನೆ ಆಗಿದೆ. ಕೇಂದ್ರ ಸಚಿವ ಸಂಪುಟದಲ್ಲಿಟ್ಟು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಅನುದಾನ ಬಿಡುಗಡೆ ಮಾಡಿಸುವಂತೆ ಒತ್ತಾಯ ಮಾಡಲಾಗಿದೆ. ಮತ್ತೊಮ್ಮೆ ಸುಪ್ರೀಂಕೋರ್ಟ್‌ನಲ್ಲಿ ಯುಕೆಪಿ 4ನೇ ಹಂತದ ಯೋಜನೆಯಡಿ ಆಲಮಟ್ಟಿ ಅಣೆಕಟ್ಟು ಎತ್ತರ ಕುರಿತು ನ್ಯಾಯಾಧಿಕರಣದ ಆದೇಶವನ್ನು ನೋಟಿಫಿಕೇಷನ್ ಮಾಡಬೇಕು ಎಂದು ಕೇಂದ್ರದಿಂದಲೂ ಒತ್ತಡ ಹೇರುವ ಕುರಿತು ಮಾತುಕತೆ ನಡೆಸಿದ್ದೇನೆ. ಇದಕ್ಕೆ ಕೇಂದ್ರ ಸಚಿವರಿಂದ ಸ್ಪಂದನೆ ಸಿಕ್ಕಿದೆ ಎಂದರು.

ಹಣಕಾಸು ಸಚಿವರನ್ನು ಭೇಟಿಯಾಗಿದ್ದೇನೆ., ಈಗಾಗಲೇ 8,600 ಕೋಟಿ ಹಣವನ್ನು ನಮಗೆ ಕೊಟ್ಟಿದ್ದಾರೆ. ಎರಡು ವರ್ಷ ಸಮಯವಿದ್ದರೂ ಈಗಲೇ ಕೊಟ್ಟಿದ್ದಾರೆ. ಅದಕ್ಕೆ ಧನ್ಯವಾದ ತಿಳಿಸಿದ್ದು, ಉಳಿದ ಬಾಕಿ ಹಣವನ್ನು ಕೂಡಲೇ ಕೊಡಲು ಒತ್ತಾಯ ಮಾಡಿದ್ದೇನೆ ಎಂದು ವಿವರಿಸಿದರು.

ಇಂದು ಜಿಎಸ್​ಟಿ ಸಭೆ ಮಾಡಲಾಯಿತು. ಏಳು ರಾಜ್ಯಗಳ ಸಚಿವರು ಭಾಗಿಯಾಗಿದ್ದರು. ಅದರ ವಿವರ ಈಗ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇದೇ ತಿಂಗಳ 27-28ರಂದು ಜಿಎಸ್​ಟಿ ಕೌನ್ಸಿಲ್ ಸಭೆ ಇದೆ. ಅಲ್ಲಿ ಮಧ್ಯಂತರ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ವಿಶೇಷಚೇತನ ಜೋಡಿಗೆ ವಿವಾಹ ಮಾಡಿಸಿದ ಗ್ರಾಮಸ್ಥರು!

Last Updated : Jun 17, 2022, 7:11 PM IST

For All Latest Updates

TAGGED:

ABOUT THE AUTHOR

...view details