ಕರ್ನಾಟಕ

karnataka

ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ: ಸಿಎಂ ನಿರ್ಧಾರ

By

Published : Aug 4, 2019, 2:09 PM IST

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ರಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದರು. ಪ್ರವಾಸೋಧ್ಯಮ ಅಭಿವೃದ್ದಿ ಕುರಿತ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರ ಪ್ರಕಟಿಸಿದರು.

ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ: ಸಿಎಂ ಬಿಎಸ್ ವೈ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ರಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವಾರ ಕಾರ್ಯಪಡೆ ಸಭೆ ನಡೆಸಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ದಿ ಬಗ್ಗೆ ಸಲಹೆ ನೀಡಲಿ. ಆ ಸಭೆಗೆ ನಾನು ಹಾಜರಾಗುತ್ತೇನೆ. ದುಡ್ಡಿನ ಬಗ್ಗೆ ಯೋಚನೆ ಮಾಡಬೇಡಿ, ಪ್ರವಾಸೋದ್ಯಮ ಅಭಿವೃದ್ದಿ ಬಗ್ಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಈ ಸಂದರ್ಭದಲ್ಲಿ ತಿಳಿಸಿದರು.

ಸಭೆಯಲ್ಲಿ ಸುಧಾಮೂರ್ತಿ ಸರ್ಕಾರಕ್ಕೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಪ್ರವಾಸೋದ್ಯಮ ಅಭಿವೃದ್ದಿ ಬಗ್ಗೆ ಸಲಹೆ ನೀಡಿದರು. ಪ್ರಾಚೀನ ಸ್ಮಾರಕಗಳ ರಕ್ಷಣೆ ಜೊತೆಗೆ ಇತಿಹಾಸ ತಿಳಿಸುವ ಕೆಲಸ ಆಗಬೇಕಿದೆ. ರಾಜ್ಯದ ಪ್ರಾಚೀನ ದೇವಸ್ಥಾನಗಳ ಮುಂದೆ ಸರ್ಕಾರದ ನಿಯಮಗಳ ಬಗ್ಗೆ ನಾಮಫಲಕ ಇರುತ್ತದೆ. ಆದರೆ ದೇವಸ್ಥಾನ ನಿರ್ಮಿಸದವರು ಯಾರು, ಯಾವ ರಾಜರು ನಿರ್ಮಿಸಿದರು ಈ ರೀತಿಯ ಇತಿಹಾಸ ಹೇಳುವ ನಾಮಫಲಕಗಳಿಲ್ಲ ಎಂದು ಹೇಳಿದರು.

ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ: ಸಿಎಂ ಬಿಎಸ್ ವೈ ನಿರ್ಧಾರ

ಕೆಲವು ದೇವಸ್ಥಾನಗಳಿಗೆ ರೂಢಿಯಿಂದ ಬಂದಿರುವ ಹೆಸರುಗಳಿವೆ. ಉದಾಹರಣೆಗೆ, ಹುಚ್ಚಮಲ್ಲಿ ಗುಡಿ, ಗೌಡರ ಗುಡಿ ಹೀಗೆ ದೇವಸ್ಥಾನಗಳಿಗೆ ಹೆಸರು ಬಂದಿವೆ. ಇತಿಹಾಸಕಾರರು ಇಂತಹ ದೇವಸ್ಥಾನಗಳ ಇತಿಹಾಸ ಪತ್ತೆಮಾಡಿ‌ ದೇವಸ್ಥಾನಗಳ ನಿಜವಾದ ಹೆಸರು ಇಡಬೇಕು. ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಕಲೆಗಳಿವೆ. ಕಲೆಗಳ ಉಳಿಸುವಿಕೆ ಅವಶ್ಯಕವಾಗಿದೆ ಎಂದು ಸರ್ಕಾರಕ್ಕೆ ಸುಧಾಮೂರ್ತಿ ಸಲಹೆ ನೀಡಿದರು.

ಈ ಸಭೆ ಕನ್ನಡ ನಾಡಿನ ಸಂಸ್ಕೃತಿಯ ಅಭಿವೃದ್ಧಿಗೆ ತುಂಬಾ ಅವಶ್ಯಕ. ಹೊರ ದೇಶಗಳಿಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ನೋಡುತ್ತೇವೆ. ನಮ್ಮ ರಾಜ್ಯದಲ್ಲಿ ಇದು ಏಕೆ ಸಾಧ್ಯವಿಲ್ಲ ಅಂತ ಚರ್ಚೆ ಮಾಡುತ್ತೇವೆ. ಗದಗ ಜಿಲ್ಲೆಯಲ್ಲಿ ಪುಲಿಗೆರೆ ಉತ್ಸವ ಮಾಡುವುದರಿಂದ ಹಲವು ಲಾಭಗಳಾಗಿವೆ. ಹೀಗೆ ರಾಜ್ಯದಲ್ಲಿ ಹಲವು ಉತ್ಸವಗಳನ್ನು ಮಾಡಬಹುದು. ಇದರಿಂದ ಜನರಲ್ಲಿ ಸಂಸ್ಕ್ರತಿ ಬಗ್ಗೆ ಜಾಗೃತಿ ಮೂಡಿಸಬಹುದು. ಇದಕ್ಕೆಲ್ಲಾ ಮೂಲಭೂತ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details