ಬೆಂಗಳೂರು :ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಭೇಟಿ ನೀಡಿದರು. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಪಾಸಿಟಿವ್ ಬಂದಿರುವ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಆತಂಕ ಪಡುವು ಅಗತ್ಯವಿಲ್ಲ. ಕೊರೊನಾದಿಂದ ಸಾವಿನ ಪ್ರಮಾಣ ಕೇವಲ 3.4 ಅಷ್ಟೇ.. ಹೀಗಾಗಿ ಹೆಚ್ಚು ಭಯ ಬೇಡ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕೊರೊನಾಗಾಗಿ ಸುಮಾರು 300 ಬೆಡ್‌ಗಳನ್ನ ತರಲು ಪ್ಲಾನ್ ಮಾಡಲಾಗಿದೆ. ಮದುವೆ ಸಮಾರಂಭಗಳನ್ನೂ ಮಾಡಲೇಬಾರದು ಅನ್ನೋ ಕಡ್ಡಾಯವಿಲ್ಲ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಸಹಕರಿಸಬೇಕು. ಆರ್ಥಿಕವಾಗಿ ಎಲ್ಲಾ ಕಡೆ ನಷ್ಟವಾಗುತ್ತೆ. ಇದರಿಂದ ಸರ್ಕಾರಕ್ಕೂ ನಷ್ಟ. ಆದರೆ, ಇದು ಪ್ರಾಣಕ್ಕಿಂತ ದೊಡ್ಡದೇನಲ್ಲ ಎಂದು ತಿಳಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ಕಡೆತಗೊಳಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಶನಿವಾರ ಹಾಗೂ ಭಾನುವಾರ ಕೆಲಸ ಮಾಡುವವರಿಗೆ ವಿಶೇಷ ಭತ್ಯೆ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದರು.
ಇನ್ಫೋಸಿಸ್ ಫೌಂಡೇಷನ್‌ನ ಡಾ. ಸುಧಾಮೂರ್ತಿ, ಡಾ. ದೇವಿಶೆಟ್ಟಿ ಮಹೇಶ್ ಅಂತಹವರು ಕೊರೊನಾ ತಡೆಗಟ್ಟಲು ಸಹಾಯಹಸ್ತ ನೀಡಲು ಮುಂದಾಗಿದ್ದಾರೆ. ಸದ್ಯ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆದ್ರೆ ಜನರಲ್ಲಿ ನಂಬಿಕೆ ಬರಲಿದೆ ಎಂದರು.