ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷ ಪೂರೈಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಬ್ಬ ಸಾಮಾನ್ಯ ಶಿಕ್ಷಕನ ಮಗನಾದ ನನ್ನನ್ನು ಆಶೀರ್ವದಿಸಿದ ಚಿಕ್ಕಬಳ್ಳಾಪುರದ ಜನತೆಗೆ ಹಾಗೂ 30 ವರ್ಷಗಳ ಬಳಿಕ ಕ್ಷೇತ್ರಕ್ಕೆ ಸಚಿವ ಸ್ಥಾನದ ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿಗೂ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ, ಪಕ್ಷದ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಎಂದಿದ್ದಾರೆ.
ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಗಳನ್ನು ತರುವ ಆಶಯ, ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಕೊರೊನಾ ವಿರುದ್ಧದ ಹೋರಾಟದ ಸವಾಲಿನ ನಡುವೆ ಜನತೆಯ ಸೇವೆ ಮಾಡಿರುವ ತೃಪ್ತಿ ಇದೆ. ಈ ಕುರಿತಂತೆ ಒಂದು ರಿಪೋರ್ಟ್ ಕಾರ್ಡ್ ಅನ್ನು ಶೀಘ್ರವೇ ಜನತೆಯ ಮುಂದಿಡಲಿದ್ದೇನೆ ಎಂದಿದ್ದಾರೆ.
ಇನ್ನು, ಮೊದಲು ವೈದ್ಯಕೀಯ ಖಾತೆ ಪಡೆದ ಡಾ.ಕೆ ಸುಧಾಕರ್ ಬಳಿಕ ಆರೋಗ್ಯ ಇಲಾಖೆಯನ್ನು ಕೊರೊನಾ ಕಾರಣಕ್ಕೆ ತಮ್ಮ ತೆಕ್ಕೆಗೆ ಪಡೆದುಕೊಂಡರು.
ಓದಿ : ಸಂಕ್ರಮಣದ ಭೀಕರ ಅಪಘಾತ ಪ್ರಕರಣ : ಹೆದ್ದಾರಿ ತಡೆದು ಪೂಜೆ ಸಲ್ಲಿಸಿದ ಮೃತರ ಕುಟುಂಬಸ್ಥರು..