ಬೆಂಗಳೂರು:ಇಂದು ಮತ್ತೊಂದು ಜೀವಂತ ಹೃದಯ ಶಸ್ತ್ರಚಿಕಿತ್ಸೆಗೆ ಉದ್ಯಾನನಗರಿ ಸಾಕ್ಷಿಯಾಗಿದ್ದು, ಹೆಬ್ಬಾಳದ ಅಸ್ತರ್ ಸಿಎಂಐ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಚಂದಾಪುರದಲ್ಲಿರುವ ನಾರಾಯಣ ಹೃದಯಾಲಯಕ್ಕೆ ತರಲಾಯಿತು.
ಜೀವಂತ ಹೃದಯವನ್ನು ಅಂಬ್ಯುಲೆನ್ಸ್ ಮೂಲಕ ಕೇವಲ 45 ನಿಮಿಷದಲ್ಲಿ 63 ಕಿಲೋ ಮೀಟರ್ ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರು-ಹೊಸೂರು ಹೆದ್ದಾರಿಯ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ತರಲಾಯಿತು.
ಜೀವಂತ ಹೃದಯವನ್ನು ಯಶಸ್ವಿ ರವಾನೆ ಮೆದುಳಿನ ನಿಷ್ಕ್ರೀಯದಿಂದ ಹೆಬ್ಬಾಳ ಅಸ್ತರ್ ಸಿಎಂಐ ಆಸ್ಪತ್ರೆಯಲ್ಲಿ ಸುಮಾರು 34 ವರ್ಷದ ಮಹಿಳೆ ನಿನ್ನೆ ಕೊನೆಯುಸಿರೆಳೆದಿದ್ದರು. ನಂತರ ಅವರ ಕುಟುಂಬದವರು ಆಕೆಯ ಹೃದಯವನ್ನು ದಾನ ಮಾಡಲು ತೀರ್ಮಾನಿಸಿದ್ದರು. ಇದೀಗ ಬೆಂಗಳೂರು ಮೂಲದ 16 ವರ್ಷದ ಯುವಕನಿಗೆ ಹೃದಯವನ್ನು ಯಶಸ್ವಿಯಾಗಿ ಜೋಡಿಸಲಾಗಿದೆ.
ಈ ಯುವಕ ಕಾರ್ಡಿಯೊಮಿಯೋಪಥಿ ಎಂಬ ರೋಗದಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.ಇದೀಗ ಯುವಕನಿಗೆ ಜೀವಂತ ಹೃದಯವನ್ನು ಆಪರೇಷನ್ ನಡೆಸಿ ಜೋಡಿಸಿದ್ದಾರೆ. ಯುವಕ ಆರೋಗ್ಯವಾಗಿದ್ದಾನೆ ಎಂದು ಆಸ್ಪತ್ರೆ ಡಾಕ್ಟರ್ ಟೂಲಿಯೋಸ್ ಪುನ್ನೇನ್ ಕಾರ್ಡಿಯೋಥಿಕ್ ಸರ್ಜನ್ ತಿಳಿಸಿದರು.