ಬೆಂಗಳೂರು: ಇತ್ತೀಚೆಗಷ್ಟೇ ವೈದ್ಯಕೀಯ ಲೋಕಕ್ಕೆ ಪರಿಚಯವಾದ ರೋಬೋಟ್ ಅಸಿಸ್ಟೆಡ್ ಕರೋನರಿ ಆರ್ಟರಿ ಬೈಪಾಸ್ ಸರ್ಜರಿ (ಸಿಎಬಿಜಿ)ಯ ಮೂಲಕ ಹೃದಯಾಘಾತಕ್ಕೆ ಒಳಗಾಗಿದ್ದ ನಾಲ್ವರು ರೋಗಿಗಳನ್ನು ಫೊರ್ಟಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಬದುಕಿಸಿದ್ದು, ಈ ನೂತನ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಿದೆ ಎಂದು ಫೊರ್ಟಿಸ್ ಆಸ್ಪತ್ರೆ ಹೃದಯ ತಜ್ಞ ಡಾ. ವಿವೇಕ್ ಜವಳಿ ಹೇಳಿದ್ದಾರೆ.
40 ವರ್ಷ ಮೇಲ್ಪಟ್ಟ ನಾಲ್ವರು ರೋಗಿಗಳು ವಿವಿಧ ಕಾರಣಗಳಿಂದ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮೊದಲು ಆಂಜಿಯೋಗ್ರಾಮ್‌ಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು. ಈ ವೇಳೆ, ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ತಿಳಿದು ಬಂದಿತು. ಹೀಗಾಗಿ ಅವರಿಗೆ ಈ ನೂತನ ತಂತ್ರಜ್ಞಾನವಾದ ರೋಬೋಟಿಕ್ ಚಿಕಿತ್ಸೆ ನೀಡಲಾಯಿತು ಎಂದಿದ್ದಾರೆ.