ಕರ್ನಾಟಕ

karnataka

ETV Bharat / state

ಬೆಂಗಳೂರಿನ ಆಸ್ಪತ್ರೆಯಲ್ಲಿ ಪಾಕ್‌ನ 2 ವರ್ಷದ ಮಗುವಿಗೆ ಯಶಸ್ವಿ ಬೋನ್ ಮ್ಯಾರೊ ಕಸಿ - ಹೆಲ್ತ್ ಚೈನ್ ನಾರಾಯಣ ಹೆಲ್ತ್ ಅಧ್ಯಕ್ಷ ದೇವಿ ಶೆಟ್ಟಿ

ಪಾಕಿಸ್ತಾನದ ದೊಡ್ಡ ನಗರ ಕರಾಚಿಯಿಂದ ಆಗಮಿಸಿದ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಿಕಂದರ್ ಬಖ್ತ್ ಅವರ ಮಗಳು ಅಮೈರಾ ಮ್ಯೂಕೋಪೊಲಿಸ್ಯಾಕರಿಡೋಸಿಸ್ ಟೈಪ್ 1 ನಿಂದ ಗುಣಮುಖಳಾಗಿದ್ದಾಳೆ. ಈಕೆಗೆ ಬೆಂಗಳೂರಿನ ನಾರಾಯಣ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು.

ನಾರಾಯಣ ಆಸ್ಪತ್ರೆ
ನಾರಾಯಣ ಆಸ್ಪತ್ರೆ

By

Published : Oct 19, 2022, 6:54 PM IST

ಬೆಂಗಳೂರು:ಪಾಕಿಸ್ತಾನದ ಎರಡು ವರ್ಷದ ಮಗು ಅಮೈರಾ ಸಿಕಂದರ್ ಖಾನ್‌ಗೆ (2 ವರ್ಷ 6 ತಿಂಗಳು) ನಗರದ ನಾರಾಯಣ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಮ್ಯೂಕೋಪೊಲಿಸ್ಯಾಕರಿಡೋಸಿಸ್ ಎನ್ನುವುದು ಅಪರೂಪದ ಕಾಯಿಲೆ. ಇದು ಕಣ್ಣುಗಳು ಮತ್ತು ಮೆದುಳು ಸೇರಿದಂತೆ ಅನೇಕ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ ಎಂದು ನಾರಾಯಣ ಹೆಲ್ತ್ ಚೈನ್‌ ಅಧ್ಯಕ್ಷ ದೇವಿ ಶೆಟ್ಟಿ ತಿಳಿಸಿದರು.

'ಪಾಕಿಸ್ತಾನದ ದೊಡ್ಡ ನಗರ ಕರಾಚಿಯಿಂದ ಬಂದ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಿಕಂದರ್ ಬಖ್ತ್ ಅವರ ಮಗಳು ಅಮೈರಾ ಮ್ಯೂಕೋಪೊಲಿಸ್ಯಾಕರಿಡೋಸಿಸ್ ಟೈಪ್ 1 ನಿಂದ ಗುಣಮುಖಳಾಗಿದ್ದಾಳೆ. ತನ್ನ ತಂದೆಯ ಮೂಳೆ ಮಜ್ಜೆಯನ್ನು ಬಳಸಿ ಆಕೆಯ ಪ್ರಾಣ ಉಳಿಸಿದ್ದೇವೆ' ಎಂದು ದೇವಿ ಶೆಟ್ಟಿ ಹೇಳಿದರು.

ಇದನ್ನೂ ಓದಿ:ಬಡ ರೋಗಿಗಳ ಚಿಕಿತ್ಸೆಗಾಗಿ 10 ಕೋಟಿ ರೂ ರಹಸ್ಯ ದೇಣಿಗೆ ನೀಡಿದ ಅನಾಮಿಕ ವೈದ್ಯ!

ABOUT THE AUTHOR

...view details