ಕರ್ನಾಟಕ

karnataka

ETV Bharat / state

100 ದಿನ ಪೂರೈಸಿದ ಯಜಮಾನ... ಸಿನಿಮಾಗಾಗಿ ಶ್ರಮಿಸಿದವರಿಗೆ ನೆನಪಿನ ಕಾಣಿಕೆ - sandalwood

ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಡಿ-ಬಾಸ್ ಅಭಿನಯದ ಯಜಮಾನ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿದೆ.  ಇನ್ನು ಇದೇ ಖುಷಿಯಲ್ಲಿ ಚಿತ್ರತಂಡ ಅದ್ದೂರಿ ಕಾರ್ಯಕ್ರಮವನ್ನು ಏರ್ಪಡಿಸಿ ಚಿತ್ರದ ತೆರೆ ಹಿಂದೆ ಹಾಗೂ ಮುಂದೆ ಶ್ರಮಿಸಿದ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಯಶಸ್ವಿ 100 ದಿನ ಪೂರೈಸಿದ d-boss ಅಭಿನಯದ ಯಜಮಾನ

By

Published : Jun 16, 2019, 8:16 AM IST

ಬೆಂಗಳೂರು: ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಡಿ- ಬಾಸ್ ಅಭಿನಯದ ಯಜಮಾನ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಅದ್ದೂರಿ ಕಾರ್ಯಕ್ರಮವನ್ನು ಏರ್ಪಡಿಸಿ ಚಿತ್ರದ ತೆರೆ ಹಿಂದೆ ಹಾಗೂ ಮುಂದೆ ಶ್ರಮಿಸಿದವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಿರ್ದೇಶಕರಾದ ಹರಿಕೃಷ್ಣ ಹಾಗೂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಹಾಗೂ ರಾಂಬೊ ಶರಣ್ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿದರು. ಇನ್ನು ಚಿತ್ರದಲ್ಲಿ ವರ್ಕ್ ಮಾಡಿದ ಎಲ್ಲ ತಾಂತ್ರಿಕ ವರ್ಗ ಹಾಗೂ ನಟ-ನಟಿಯರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಅಲ್ಲದೆ ಚಿತ್ರದ ಯಶಸ್ಸಿಗೆ ಕಾರಣರಾದ ಕನ್ನಡದ ಸಿನಿಪ್ರಿಯರು ಹಾಗೂ ಮಾಧ್ಯಮದವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಮತ್ತೆ ದರ್ಶನ್ ತಮ್ಮ ಸರಳತೆಯನ್ನು ತೋರಿಸಿದರು. ಚಿತ್ರದಲ್ಲಿ ನಟಿಸಿದ್ದ ಮೈಸೂರು ಮಾಲತಿ ಅವರು ನೆನಪಿನ ಕಾಣಿಕೆ ಸ್ವೀಕರಿಸಲು ಸ್ಟೇಜ್ ಮೇಲೆ ಕರೆದಾಗ , ವಯಸ್ಸಾದ ಕಾರಣ ಸ್ಟೇಜ್ ಹತ್ತಲು ಬೇರೆಯವರ ಸಹಾಯ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಸಾರಥಿ ಸ್ಟೇಜ್ ಮೇಲಿಂದ ಇಳಿದು ಮಾಲತಿ ಅವರಿದ್ದ ಬಳಿಗೆ ಬಂದು ನೆನಪಿನ ಕಾಣಿಕೆಯನ್ನು ನೀಡಿ ತಮ್ಮ ಸರಳತೆಯನ್ನು ಪ್ರದರ್ಶಿಸಿದರು.

ಯಶಸ್ವಿ 100 ದಿನ ಪೂರೈಸಿದ d-boss ಅಭಿನಯದ ಯಜಮಾನ

ABOUT THE AUTHOR

...view details