ಬೆಂಗಳೂರು:ಮೈತ್ರಿ ಸರ್ಕಾರದ ಸಚಿವರ ಆಪ್ತ ಸಿಬ್ಬಂದಿಗಳಾಗಿ ಗುತ್ತಿಗೆ/ ವರ್ಗಾವಣೆ/ನಿಯೋಜನೆ/ ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕಾರ್ಯ ಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೈತ್ರಿ ಸರ್ಕಾರದ ಸಚಿವರ ಆಪ್ತ ಸಿಬ್ಬಂದಿಯನ್ನು ಕಾರ್ಯಮುಕ್ತಗೊಳಿಸಿ ಆದೇಶ - coalition govt ministers staff removed
ಮೈತ್ರಿ ಸರ್ಕಾರದ ಸಚಿವರ ಆಪ್ತ ಸಿಬ್ಬಂದಿಗಳಾಗಿ ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕಾರ್ಯ ಮುಕ್ತಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧ
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದ್ದು, ಸಚಿವರ ಆಪ್ತ ಶಾಖೆಯ ಕಡತ ದಾಖಲೆಗಳನ್ನು ಸಿಬ್ಬಂದಿ ಸಂಬಂಧಪಟ್ಟವರಿಗೆ ಕೂಡಲೇ ಹಸ್ತಾಂತರಿಸಲು ಆದೇಶಿಸಲಾಗಿದೆ.
ಸಚಿವಾಲಯದ ನೌಕರರು ಸಂಬಂಧಪಟ್ಟ ಆಡಳಿತ ವಿಭಾಗದಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕು. ನಿಯೋಜನೆ ಹಾಗೂ ಒಪ್ಪಂದದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ತಮ್ಮ ಮಾತೃ ಇಲಾಖೆಗೆ ಕಾರ್ಯ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.