ಕರ್ನಾಟಕ

karnataka

ETV Bharat / state

ಉಪ ಸಮರ: ಈ ಸಾರಿ ಫ್ಲೈಯಿಂಗ್ ಸ್ಕ್ವಾಡ್​​​​​​​​ ಗಳು ವಶಕ್ಕೆ ಪಡೆದ ನಗದು ಎಷ್ಟು? - ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019

ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೊಳಿಸಿರುವ ಕುರಿತು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Election Commission
ಚುನಾವಣಾ ಆಯೋಗದಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ವರದಿ ಸಲ್ಲಿಕೆ

By

Published : Nov 26, 2019, 8:02 AM IST

Updated : Nov 26, 2019, 8:08 AM IST

ಬೆಂಗಳೂರು:ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019ರಲ್ಲಿ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೊಳಿಸಿರುವ ಕುರಿತು ಕೆಲವೆಡೆ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಚುನಾವಣಾ ಆಯೋಗ ಮಾಹಿತಿ ಒದಗಿಸಿದೆ.

ಮಾದರಿ ನೀತಿ ಸಂಹಿತೆ
323 ಫ್ಲೈಯಿಂಗ್​​​ ಪ್ಯಾಡ್‌ಗಳಿವೆ ಮತ್ತು 578 ಸ್ಥಾಯಿ ಕಣ್ಣಾವಲು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಉದ್ದೇಶದಿಂದ ರಚಿಸಲಾದ ಫ್ಲೈಯಿಂಗ್ ಸ್ಕ್ವಾಡ್​​​​​ಗಳು ಸಾರ್ವಜನಿಕ ಕಟ್ಟಡಗಳ ವ್ಯಾಪ್ತಿಯ 1,527 ಸಂಖ್ಯೆಯ ಗೋಡೆ ಬರಹ, 7,963 ಸಂಖ್ಯೆಯ ಪೋಸ್ಟರ್​ಗಳನ್ನು ಮತ್ತು 2,359 ಸಂಖ್ಯೆಯ ಬ್ಯಾನರ್‌ಗಳನ್ನು ತೆಗೆದುಹಾಕಿದೆ. ಖಾಸಗಿ ಕಟ್ಟಡಗಳ ವ್ಯಾಪ್ತಿಯಲ್ಲಿ ಒಟ್ಟು 835 ಗೋಡೆ ಬರಹ, 1352 ಸಂಖ್ಯೆಯ ಪೋಸ್ಟರ್ ಮತ್ತು 1,462 ಸಂಖ್ಯೆಯ ಬ್ಯಾನರ್​ಗಳನ್ನುತೆಗೆದುಹಾಕಲಾಗಿದೆ.

ಕಳೆದ 24 ಗಂಟೆಗಳಲ್ಲಿ ಸ್ಥಾಯೀ ಕಣ್ಗಾವಲು ತಂಡಗಳು ₹ 6,50,000 ನಗದು ಹಾಗೂ ₹ 52,136 ಮೌಲ್ಯದ 148 ಕುಪ್ಪಸದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆಯಾಗಿ, ಇಲ್ಲಿಯವರೆಗೆ ಸ್ಥಾಯೀ ಕಣ್ಗಾ ವಲು ತಂಡಗಳು ₹ 42,13,930 ನಗದು ಹಾಗೂ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ₹ 2,00,000 ಮೌಲ್ಯದ ವಾಹನಗಳು ಮತ್ತು ₹ 30,83,319 ಮೌಲ್ಯದ ಸೀರೆಗಳು ವಶಪಡಿಸಿಕೊಳ್ಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್​ ಸ್ಕ್ವಾಡ್​​ ತಂಡಗಳು ₹ 1,057 ಮೌಲ್ಯದ ಮದ್ಯ ಮತ್ತು ಪೊಲೀಸ್ ಅಧಿಕಾರಿಗಳು ₹ 2,270 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಫ್ಲೈಯಿಂಗ್​ ಸ್ಕ್ವಾಡ್​​ ಮತ್ತು ಪೊಲೀಸ್ ಅಧಿಕಾರಿಗಳು ₹ 95,19,291 ನಗದು ಮತ್ತು ₹ 1,13,741ಮೌಲ್ಯದ ಮದ್ಯ ಮತ್ತು ₹ 4,28,841 ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಒಟ್ಟಾರೆಯಾಗಿ, ಫ್ಲೈಯಿಂಗ್​​, ಎಸ್‌ಎಸ್​ಟಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿ ₹ 1,37,33,221 ನಗದು ವಶಪಡಿಸಿಕೊಂಡಿವೆ.

ಫ್ಲೈಯಿಂಗ್​​ ತಂಡಗಳು ಮತ್ತು ಇತರ ಪೊಲೀಸ್ ಅಧಿಕಾರಿಗಳು ಕಳೆದ 24 ಗಂಟೆಗಳಲ್ಲಿ 11 ಪ್ರಕರಣಗಳನ್ನು ನಗದು ವಶಪಡಿಸಿಕೊಳ್ಳುವಿಕೆ ಮತ್ತು ಇತರ ಎಂಸಿಸಿ ಸಂಬಂಧಿತ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಪ್ಲೈಯಿಂಗ್​​ ಸ್ಕ್ವಾಡ್​​ಗಳು 104 ಪ್ರಕರಣಗಳಲ್ಲಿ ಎಫ್‌ಐಆರ್​ಗಳನ್ನು ನೋಂದಾಯಿಸಿವೆ.

ಒಟ್ಟಾರೆಯಾಗಿ, ಸ್ಥಾಯೀ ಕಣ್ಣಾವಲು ತಂಡಗಳು 1 ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದೆ. ಅಬಕಾರಿ ಇಲಾಖೆಯ ₹ 41,045 ರೂ. ಮೌಲ್ಯದ 83 ಲೀಟರ್ ಐಎಂಎಲ್ ಮತ್ತು ಇತರ ಮದ್ಯವನ್ನು ವಶಪಡಿಸಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿ 5 ಗಂಭೀರ ಪ್ರಕರಣಗಳು, ಪರವಾನಗಿ ಉಲ್ಲಂಘನೆಗೆ 9 ಪ್ರಕರಣಗಳು ಮತ್ತು 49 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಒಟ್ಟಾರೆಯಾಗಿ, ₹ 3,38,53,368 ಮೌಲ್ಯದ 176214 ಲೀಟರ್ ಐಎಂಎಲ್ ಮತ್ತು ಇತರ ಮದ್ಯ, 126 ಗಂಭೀರ ಪ್ರಕರಣ, ಪರವಾನಗಿ ಷರತ್ತುಗಳು ಉಲ್ಲಂಘನೆಗೆ 188 ಪ್ರಕರಣಗಳು ದಾಖಲಾಗಿವೆ.

Last Updated : Nov 26, 2019, 8:08 AM IST

ABOUT THE AUTHOR

...view details