ಬೆಂಗಳೂರು: ಸಿಬ್ಬಂದಿಯ ಕಾರ್ಯದಕ್ಷತೆ ಉತ್ತಮಪಡಿಸಲು 'ಸುಬಾಹು' ವ್ಯವಸ್ಥೆಯನ್ನು ನಗರ ಪೊಲೀಸರು ಇತ್ತೀಚೆಗೆ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಸ್ವಆಸಕ್ತಿವಹಿಸಿ ಸುಬಾಹು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಈ ಆ್ಯಪ್ ಅನ್ನು ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರು ಬಳಸಲು ಸಾಧ್ಯವಿಲ್ಲ. ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ನಿತ್ಯ ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳು ಬೀಟ್‌ಗೆ ಹೊರಡುವ ಸಿಬ್ಬಂದಿಯ ಫೋಟೋವನ್ನು ಅವರ ಮೊಬೈಲ್‌ನಿಂದಲೇ ತೆಗೆದು, ಜಿಪಿಎಸ್ ಆನ್ ಮಾಡಿ ಆ್ಯಪ್ ಮೂಲಕ ಬೀಟ್ ನಿಗದಿಪಡಿಸುತ್ತಾರೆ.