ಕರ್ನಾಟಕ

karnataka

ETV Bharat / state

ಎಂಎಸ್‌ಎಂಇಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ  ತರಬೇತಿ ನೀಡಬೇಕು: ಡಾ. ಅಶ್ವತ್ಥನಾರಾಯಣ

ನಾನಾ ಕ್ಷೇತ್ರದ ಉದ್ಯಮಿಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಬೆಂಗಳೂರಿನ ಬ್ಯುಸಿನೆಸ್​​‌ ನೆಟವರ್ಕ್‌ ಇಂಟರ್‌ನ್ಯಾಷನಲ್‌ ನ ಉದ್ಯಮಿಗಳ ಜೊತೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿಡಿಯೋ ಕಾನ್ಫರೆನ್ಸ್‌ ನಡೆಸಿದರು.

Students should be given quality training: The Ashwattanarayana
ಎಂಎಸ್‌ಎಂಇಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಬೇಕು: ಡಾ. ಅಶ್ವತ್ಥನಾರಾಯಣ

By

Published : Jun 3, 2020, 7:00 PM IST

ಬೆಂಗಳೂರು:ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸರ್ಕಾರದ ಕಡೆಯಿಂದ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ನುರಿತ ಕೆಲಸಗಾರರನ್ನು ಒದಗಿಸಲು ಇಂಜಿನಿಯರಿಂಗ್‌, ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಪೂರಕ ತರಬೇತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ನಾನಾ ಕ್ಷೇತ್ರದ ಉದ್ಯಮಿಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಬೆಂಗಳೂರಿನ ಬ್ಯುಸಿನೆಸ್‌ ನೆಟವರ್ಕ್‌ ಇಂಟರ್‌ನ್ಯಾಷನಲ್‌ ನ ಉದ್ಯಮಿಗಳ ಜೊತೆ ಬುಧವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಅವರು ಮಾತನಾಡಿದರು.

ಸುಧಾರಿತ ತಂತ್ರಜ್ಞಾನ ಅಳವಡಿಕೆ, ಕೌಶಲ ಅಭಿವೃದ್ಧಿ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ತಂದರೆ ಮಾರುಕಟ್ಟೆ ತನ್ನಿಂದ ತಾನೇ ಸೃಷ್ಟಿ ಆಗುವುದು. ಈ ನಿಟ್ಟಿನಲ್ಲಿ ಉದ್ದಿಮೆಗಳಿಗೆ ನುರಿತ ಕೆಲಸಗಾರರನ್ನು ಒದಗಿಸಲು ಇಂಜಿನಿಯರಿಂಗ್‌, ಡಿಪ್ಲೊಮಾ ಹಾಗೂ ಐಟಿಐಗಳಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲಾಗುವುದು. ಪಠ್ಯಕ್ರಮ ಬದಲಿಸಿ, ಉದ್ದಿಮೆ ಅವಶ್ಯಕತೆಗೆ ತಕ್ಕಂತೆ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 27 ಸರ್ಕಾರಿ ಟೂಲ್‌ ರೂಂ ಮತ್ತು ತರಬೇತಿ ಕೇಂದ್ರಗಳಿದ್ದು, ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಶೇ.100ರಷ್ಟು ಉದ್ಯೋಗ ಖಾತರಿ ನೀಡಲಾಗುತ್ತದೆ. ಸೀಮನ್ಸ್‌, ಪ್ರೊಮೆಟ್ರಿಕ್‌ ಮುಂತಾದ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಕೇಂದ್ರಗಳಲ್ಲಿ ಉದ್ದಿಮೆಗೆ ಪೂರಕವಾದ ತರಬೇತಿ ನೀಡಲಾಗುತ್ತಿದೆ. ಇದಲ್ಲದೇ, ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬಳಕೆಯಾಗದ ಸ್ಥಳವನ್ನು ಸ್ವಾಧೀನಕ್ಕೆ ಪಡೆದು ಅಲ್ಲಿ ತರಬೇತಿ ಕೇಂದ್ರ ನಡೆಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 10ನೇ ತರಗತಿ ನಂತರದ 4 ವರ್ಷದ ಕೋರ್ಸ್‌ ಜೊತೆಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಂಜಿನಿಯರಿಂಗ್‌, ಡಿಪ್ಲೊಮಾ ಹಾಗೂ ಐಟಿಐ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿಯನ್ನು ನೀಡಲಾಗುತ್ತದೆ ಅವರು ವಿವರಿಸಿದರು.

ರಾಜ್ಯದ 250 ಡಿಪ್ಲೋಮಾ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ನ್ಯಾಸ್ಕಾಮ್‌, ಮೈಕ್ರೊಸಾಫ್ಟ್‌ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತಿದೆ. ಕೃತಕ ಬುದ್ಧಿಮಟ್ಟ, ಡೇಟಾ ಸೈನ್ಸ್‌, ರೊಬೊಟಿಕ್ಸ್‌, ಮಷೀನ್‌ ಲರ್ನಿಂಗ್‌ ಮುಂತಾದ ಸ್ನಾತಕೋತ್ತರ ಮಟ್ಟದ ಪಠ್ಯಕ್ರಮವನ್ನು ಡಿಪ್ಲೋಮಾ ಹಂತದಲ್ಲಿ ಕಲಿಸಲು ಉದ್ದೇಶಿಸಲಾಗಿದೆ. ಸರಿಯಾದ ಶಿಕ್ಷಣ, ಕೌಶಲ ಇಲ್ಲದಿದ್ದರೆ ಉದ್ದಿಮೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.

ABOUT THE AUTHOR

...view details