ಬೆಂಗಳೂರು : ಭಾರತೀಯ ದಂತ ವೈದ್ಯಕೀಯ ಮಂಡಳಿಯು 2021-22ನೇ ಸಾಲಿನ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ನೋಂದಣಿ ದಿನಾಂಕ ಗಡವು ವಿಸ್ತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತೆ ಎಂಡಿಎಸ್ ವಿದ್ಯಾರ್ಥಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಡಿ ಕೆ ಶಿವಕುಮಾರ್‌ರನ್ನ ಭೇಟಿ ಮಾಡಿದ ಎಂಡಿಎಸ್ ವಿದ್ಯಾರ್ಥಿಗಳು.. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಪ್ರಕಾರ, 2021-2022ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾತಿಗಳನ್ನು ನೋಂದಾಯಿಸಲು ಕೊನೆಯ ದಿನಾಂಕ ನವೆಂಬರ್ 20 ಆಗಿತ್ತು. ಆದರೆ, ಗಡುವು ಮುಗಿದ ನಂತರವೂ ರಾಜ್ಯದಲ್ಲಿ ಕೋವಿಡ್ ನೆಪದಿಂದ ತಡವಾಯಿತು.
ಪ್ರಸ್ತುತ ಶೈಕ್ಷಣಿಕ ವರ್ಷ 2021-2022ಕ್ಕೆ ಎಂಡಿಸ್ ಅಭ್ಯರ್ಥಿಗಳನ್ನು ನೋಂದಾಯಿಸಲು ಡಿಸೆಂಬರ್ 31ರವರೆಗೆ ವಿಸ್ತರಿಸಲು ರಾಜ್ಯವೂ ಕೇಂದ್ರ ಸರ್ಕಾರವನ್ನು ಕೋರಿದೆ.
ಆದರೆ, ಕೇಂದ್ರ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ, ಎಂಡಿಎಸ್ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇಂದು ದಾಖಲಾತಿ ಅವಧಿ ವಿಸ್ತರಣೆಗೆ ಕೇಂದ್ರಕ್ಕೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಕೇಂದ್ರದಿಂದ ಅನುಮೋದನೆಯನ್ನು ಪಡೆಯದಿದ್ದರೆ, ರಾಜ್ಯದ ಎಲ್ಲಾ 900ಕ್ಕೂ ಎಂಡಿಎಸ್ ಆಕಾಂಕ್ಷಿಗಳು ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುತ್ತಾರೆ. ನಾವು ಪರೀಕ್ಷೆಯಲ್ಲಿ ಗಳಿಸಿದ ರ್ಯಾಂಕ್ ಕೂಡ ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ ಎಂಬ ಆತಂಕ ಹೊರ ಹಾಕಿದ್ದಾರೆ. ಹೀಗಾಗಿ, 2021-22ನೇ ಶೈಕ್ಷಣಿಕ ವರ್ಷಕ್ಕೆ ಅಭ್ಯರ್ಥಿಗಳನ್ನು ನೋಂದಾಯಿಸುವ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲು ಸಹಾಯ ಮಾಡುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸೈಟ್ ದಾಖಲೆ ಪಡೆದು ಮೋಸದ ಆರೋಪ ; ಲೋಕಾಯುಕ್ತ ಕಚೇರಿಯಲ್ಲೇ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ