ಬೆಂಗಳೂರು : ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಅತ್ಯಾಚಾರಿ ಮನಸ್ಸುಗಳು ಭಯಪಡುವಂತಹ ಶಿಕ್ಷೆ ವಿಧಿಸಬೇಕು : ವಿದ್ಯಾರ್ಥಿಗಳ ಮೌನ ಪ್ರತಿಭಟನೆ - ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ
ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನಗರದ ಎಚ್ಎಸ್ಆರ್ ಲೇಔಟ್ನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಮೌನ ಪ್ರತಿಭಟನೆ
ಹೈದರಾಬಾದ್ ವೈದ್ಯೆ ಮೇಲೆ ನಡೆದಿರುವ ಅಮಾನವೀಯ ಕೃತ್ಯ ಮತ್ತೆ ಎಲ್ಲಿಯೂ ನಡೆಯದಂತೆ ಎಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ರೀತಿಯ ಕೆಲಸವನ್ನು ಮಾಡಬೇಕೆಂಬ ಯೋಚಿಸಿದರು ಭಯಪಡುವಂತಹ ಶಿಕ್ಷೆ ಕೊಡುಬೇಕು. ಈ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಎಚ್ಎಸ್ಆರ್ ಲೇಔಟ್ ಒಂದನೇ ಸೆಕ್ಟರ್ನಿಂದ ಮೂರನೇ ಸೆಕ್ಟರ್ನವರಿಗೆ ಮೇಣದ ಬತ್ತಿಯನ್ನು ಹಿಡಿದು ಮೌನವಾಗಿ ವಿದ್ಯಾರ್ಥಿಗಳು ಪ್ರತಿಭಟಿಸಿ ನ್ಯಾಯ ಬೇಕು ಎಂದು ಪ್ರತಿಭಟಿಸಿದರು.
Last Updated : Dec 1, 2019, 8:06 AM IST