ಬೆಂಗಳೂರು: ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್ಡೌನ್ನಿಂದಾಗಿ ಕೆಲಸ ಕಾರ್ಯವಿಲ್ಲದೆ ಅದೆಷ್ಟೋ ಮಂದಿ ಕೈ ಖಾಲಿಯಾಗಿ ತುತ್ತು ಅನ್ನಕ್ಕೂ ಪರದಾಟ ನಡೆಸಿದ್ದರು. ಅಷ್ಟೇ ಅಲ್ಲದೆ ಈ ಕೊರೊನಾ ಶೈಕ್ಷಣಿಕ ಕ್ಷೇತ್ರಕ್ಕೂ ಪೆಟ್ಟು ಕೊಟ್ಟಿದ್ದು ಸುಳ್ಳಲ್ಲ. ಈಗ 2ನೇ ಅಲೆಯಲ್ಲೂ ಕೊರೊನಾ ತನ್ನ ಉಗ್ರ ಸ್ವರೂಪವನ್ನ ತೋರುತ್ತಿದೆ. ಪರಿಣಾಮ ಶೈಕ್ಷಣಿಕ ಕ್ಷೇತ್ರಕ್ಕೂ ಹೊಡೆತ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಐಐಟಿ, ನೀಟ್ ಪರೀಕ್ಷೆ ಸೇರಿದಂತೆ ಇತರೆ ಸಿವಿಲ್ ಸರ್ವೀಸ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗೂ ತೊಂದರೆಯುಂಟಾಗಿದೆ.
ಮಧ್ಯಮ ವರ್ಗದವರು, ದುರ್ಬಲ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭೆಗಳು ಲಕ್ಷ ಲಕ್ಷ ಹಣ ಕೊಟ್ಟು ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಹೋಗಲು ಆಗದ ಪರಿಸ್ಥಿತಿ ಎದುರಾಗಿದೆ. ಕೋಚಿಂಗ್ ಶುಲ್ಕ ದುಬಾರಿಯಾದ ಕಾರಣ ಪರೀಕ್ಷೆ ತಯಾರಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಸರ್ಕಾರ ಇಂತಹ ಪ್ರತಿಭೆಗಳ ತಯಾರಿಗೆ ಯಾವುದಾದರೂ ಕಾರ್ಯಕ್ರಮಗಳನ್ನು ರೂಪಿಸಿದೆಯಾ? ಕೋಚಿಂಗ್ ಸೆಂಟರ್ ಸೌಲಭ್ಯಗಳು ಇವೆಯಾ? ಇದ್ದರೂ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯಾ? ಎಂಬುದನ್ನು ನೋಡಿದರೆ ಇದ್ದರೂ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಮಾತಾನಾಡಿರುವ ಕಲ್ಯಾಣ ಕರ್ನಾಟಕ ಭಾಗದ ಸದಸ್ಯ ಸುರೇಶ್ ಹೂಡ್ಗಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್ಡಿಬಿ ಬೋರ್ಡ್ ಮೂಲಕ ಸೆಂಟರ್ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಸರ್ಕಾರಿ ಕಾಲೇಜಿನಲ್ಲಿ ಓದುವ ಪಿಯು ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಸೇರಿದಂತೆ ಇತರೆ ಪರೀಕ್ಷೆಗೂ ತಯಾರು ಮಾಡುವ ಅವಶ್ಯಕತೆ ಇರುತ್ತದೆ. ಹಾಗಾಗಿ ಹಿಂದುಳಿದ ವರ್ಗ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಾಲೇಜು ವಿಭಾಗದಲ್ಲೇ ಕೋಚಿಂಗ್ ಸೆಂಟರ್ಗಳನ್ನು ನಿರ್ಮಾಣ ಮಾಡಿದರೆ ಉತ್ತಮ. ಇಲ್ಲದೇ ಇದ್ದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ಗೆ ಲಕ್ಷ ಲಕ್ಷ ಹಣ ಕೊಡಲಾಗದೆ ಹಿಂದುಳಿದು ಬಿಡುತ್ತಾರೆ ಎಂದು ಹೇಳಿದರು.